ಕಾರ್ ಗೆ ಬೈಕ್ ಡಿಕ್ಕಿ: ಅಪಘಾತದಲ್ಲಿ ಇಬ್ಬರು ಸವಾರರು ಸಾವು

ರಾಯಚೂರು: ಕಾರ್ ಗೆ ಬೈಕ್ ಡಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಮೃತಪಟ್ಟ ಘಟನೆ ಭಾನುವಾರ ಯರಗೇರಾ ಗ್ರಾಮದ ರಾಯಚೂರು ವಿಶ್ವವಿದ್ಯಾಲಯ ಸಮೀಪ ನಡೆದಿದೆ.

ಉರುಕುಂದ(42), ಲಕ್ಷ್ಮಣ(45) ಮೃತಪಟ್ಟ ಬೈಕ್ ಸವಾರರು ಎಂದು ಗುರುತಿಸಲಾಗಿದೆ. ಬೈಕ್ ನಲ್ಲಿ ಯರಗೇರಾ ಕಡೆಗೆ ಹೋಗುವಾಗ ಕಾರ್ ಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಉರುಕುಂದ ಸ್ಥಳದಲ್ಲೇ ಸಾವನ್ನಪ್ಪಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಲಕ್ಷ್ಮಣ ಮೃತಪಟ್ಟಿದ್ದಾರೆ. ಡಿಕ್ಕಿಯ ರಭಸಕ್ಕೆ ಕಾರ್  ಮುಂಭಾಗ ಜಖಂಗೊಂಡಿದ್ದು, ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಯರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read