ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಗ್ರಾಮದ ನಿವಾಸಿಗಳ ನಡುವಿನ ಜಗಳವನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದ ಮಹಿಳಾ ಪೋಲೀಸ್ ತಲೆಗೆ ಸ್ಥಳೀಯರು ಬಾಣ ಬಿಟ್ಟು ಗಾಯಗೊಳಿಸಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಜಮೀನು ವಿವಾದವನ್ನು ಬಗೆಹರಿಸಲು ಜೋಕಿಹತ್‌ಗೆ ಬಂದಿದ್ದ ಪೊಲೀಸ್ ತಂಡದ ಮೇಲೆ ಬಿಲ್ಲು ಮತ್ತು ಬಾಣಗಳಿಂದ ದಾಳಿ ನಡೆಸಲಾಗಿದೆ. ದುರದೃಷ್ಟವಶಾತ್ ಮಹಿಳಾ ಸಬ್ ಇನ್ಸ್ ಪೆಕ್ಟರ್ ತಲೆಗೆ ಬಾಣ ಹೊಡೆದಿದೆ. ಅವರನ್ನು ಪುರ್ನಿಯಾದ ಆಸ್ಪತ್ರೆಗೆ ದಾಖಲಿಸಲಾಗಿದ್ದು ಸ್ಥಿತಿ ಗಂಭೀರವಾಗಿದೆ.
ಜೋಕಿಹತ್ ಬ್ಲಾಕ್‌ನ ಮಹಲ್ಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯ ಪೋಖಾರಿಯಾ ಗ್ರಾಮಕ್ಕೆ ಪೊಲೀಸ್ ತಂಡ ಆಗಮಿಸಿದಾಗ, ಕೆಲವು ದುಷ್ಕರ್ಮಿಗಳು ಅಕ್ರಮವಾಗಿ ಭೂಮಿಯನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ವಿವಾದಿತ ಭೂಮಿಯಲ್ಲಿ 200 ಜನರ ಗುಂಪು ಕಾನೂನು ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾಗ ಪರಿಶೀಲನೆ ಮತ್ತು ಕಾನೂನು ಸುವ್ಯವಸ್ಥೆಗಾಗಿ ಬಂದಿದ್ದ ಪೊಲೀಸರ ಮೇಲೆ ಬಾಣಗಳಿಂದ ದಾಳಿ ಮಾಡಲಾಯಿತು.
ಗಾಯಗೊಂಡ ಪೊಲೀಸ್ ಸಿಬ್ಬಂದಿಯನ್ನು ಮಹಲ್ಗಾಂವ್ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿರುವ ನುಸ್ರತ್ ಪರ್ವೀನ್ ಎಂದು ಗುರುತಿಸಲಾಗಿದೆ. ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ.
ಘಟನೆಯಲ್ಲಿ ಭಾಗಿಯಾಗಿರುವ ಆರೋಪಿಗಳ ಬಂಧನಕ್ಕೆ ಸಂಬಂಧಿಸಿದಂತೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸ್ ಹೇಳಿಕೆಯಲ್ಲಿ ತಿಳಿಸಲಾಗಿದೆ. ಈ ಕುರಿತು ಮಹಲ್ಗಾವಾನ್ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 112 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
https://twitter.com/ArariaP/status/1838084301348302926?ref_src=twsrc%5Etfw%7Ctwcamp%5Etweetembed%7Ctwterm%5E1838084301348302926%7Ctwgr%5Eca8f67f1c6f46f6b8ca256fc69976fd08