Viral Video: ಬೋಳು ತಲೆಯ ವಿಷಯ ಮುಚ್ಚಿಟ್ಟು ವಿವಾಹಕ್ಕೆ ಸಿದ್ಧನಾದ ವರ; ʼವಿಗ್‌ʼ ಧರಿಸಿರುವುದು ಗೊತ್ತಾಗುತ್ತಿದ್ದಂತೆ ಹಿಗ್ಗಾಮುಗ್ಗಾ ಗೂಸಾ…!

ಇತ್ತೀಚೆಗೆ ಯುವಕರಿಗೆ ಹೆಣ್ಣು ಸಿಗೋದು ಕಷ್ಟವಾಗಿದೆ. ಅದರಲ್ಲೂ ಗಂಡಿಗೆ ತಲೆಗೂದಲು ಇಲ್ಲಾಂದ್ರೆ ಹುಡುಗಿಯರು ಸುತರಾಂ ಮದುವೆಯಾಗಲು ಒಪ್ಪೋದೇ ಇಲ್ಲ. ಹೀಗಾಗಿ ಕೆಲವರು ಸುಳ್ಳು ಹೇಳಿ ಮದುವೆಯಾಗುತ್ತಾರೆ. ನಂತರ ಇಲ್ಲದ ಪರಿಪಾಟಲು ಅನುಭವಿಸಬೇಕಾಗುತ್ತದೆ. ಇಲ್ಲೊಬ್ಬ ಯುವಕ ಇದೇ ರೀತಿ ಸುಳ್ಳು ಹೇಳಿ ಫಜೀತಿ ಅನುಭವಿಸಿದ್ದಾನೆ.

ಹೌದು, ಬಿಹಾರದ ಹಳ್ಳಿಯೊಂದರಲ್ಲಿ ನಡೆದಿರುವ ಘಟನೆಯ ವಿಡಿಯೋ ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಬೋಳು ತಲೆಯಿದ್ದರೂ ಅದನ್ನು ಮುಚ್ಚಿಟ್ಟು ವರ ವಿಗ್ ಧರಿಸಿ ಬಂದಿದ್ದ. ವರ ಮೋಸದಿಂದ ಮದುವೆಯಾಗುತ್ತಿರುವುದು ಗೊತ್ತಾಗುತ್ತಿದ್ದಂತೆ ಹುಡುಗಿಯ ಕುಟುಂಬಸ್ಥರು ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಲ್ಲದೆ, ಇದು ಆತನ ಎರಡನೇ ಮದುವೆ ಎಂದು ಗೊತ್ತಾಗಿದೆ. ಗಯಾದ ದೋಭಿ ಪ್ರದೇಶದ ಬಜೌರಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ವರನನ್ನು ಬಿಹಾರದ ಇಕ್ಬಾಲ್ ನಗರ ಪ್ರದೇಶದ ನಿವಾಸಿ ಎಂದು ಹೇಳಲಾಗಿದೆ. ತಲೆಗೆ ವಿಗ್ ಧರಿಸಿ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ. ಈ ವೇಳೆ ವಧುವಿನ ಕುಟುಂಬಸ್ಥಋು ಆತನ ಕೂದಲಿನ ಬಗ್ಗೆ ಅನುಮಾನಗೊಂಡಿದ್ದಾರೆ.

ಕೂಡಲೇ ಹಿಡಿದು ಎಳೆದಾಗ, ವರನ ಬೋಳು ತಲೆ ಬಹಿರಂಗವಾಗಿದೆ. ಮೋಸದಿಂದ ಮದುವೆಯಾಗುತ್ತಿದ್ದಾನೆ ಎಂದು ತಿಳಿಯುತ್ತಿದ್ದಂತೆ ವಧುವಿನ ಕಡೆಯವರ ಪಿತ್ತ ನೆತ್ತಿಗೇರಿದೆ. ಸಿಟ್ಟಿನಲ್ಲಿ ವರನಿಗೆ ಗೂಸಾ ಕೊಟ್ಟಿದ್ದಾರೆ. ಆದರೆ, ವರ ಹಲವಾರು ಬಾರಿ ಮನವೊಲಿಸಲು ಪ್ರಯತ್ನಿಸಿದ್ರೂ ಸಾಧ್ಯವಾಗಲಿಲ್ಲ.

https://twitter.com/BiharTakChannel/status/1678818658586337285?ref_src=twsrc%5Etfw%7Ctwcamp%5Etweetembed%7Ctwterm%5E1678818658586337285%7Ctwgr%5E5f0f2be465a3f3ff7435ae8452c578b1c92fec11%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fbihar-viral-video-bald-groom-beaten-up-in-dobhi-village-for-deceitfully-trying-to-marry-posing-fake-hair

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read