ಕಾಮುಕರ ಅಟ್ಟಹಾಸ: ಸಾಮೂಹಿಕ ಅತ್ಯಾಚಾರ ಎಸಗಿ ಸ್ತನ ಕತ್ತರಿಸಿ ಮಹಿಳೆ ಹತ್ಯೆ: ನಾಲ್ವರು ಅರೆಸ್ಟ್

ಪಾಟ್ನಾ: ಬಿಹಾರದ ನವಾಡದಲ್ಲಿ ನಡೆದ ವೃದ್ಧೆ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಭೇದಿಸಿದ ಪೊಲೀಸರು ಶನಿವಾರ ನಾಲ್ವರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಸುನೀಲ್ ಯಾದವ್, ವಿಪಿನ್ ಯಾದವ್, ಪಿಂಟು ಯಾದವ್ ಮತ್ತು ನಿರಂಜನ್ ಯಾದವ್ ಎಂದು ಗುರುತಿಸಲಾಗಿದೆ. ಐದನೇ ಆರೋಪಿ ಕರು ಯಾದವ್ ಇನ್ನೂ ತಲೆಮರೆಸಿಕೊಂಡಿದ್ದಾನೆ. ಆರೋಪಿಗಳು 60 ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದು, ಆಕೆಯ ಸ್ತನಗಳನ್ನು ಕತ್ತರಿಸಿ ಕತ್ತು ಸೀಳಿದ್ದಾರೆ. ಡಿಸೆಂಬರ್ 25 ರಂದು ಈ ಘಟನೆ ನಡೆದಿದೆ.

ಸಂತ್ರಸ್ತ ಮಹಿಳೆ ಗಯಾ ಜಿಲ್ಲೆಯ ಜಹಾನಾ ಗ್ರಾಮದ ನಿವಾಸಿ. ಪತಿಯೊಂದಿಗೆ ನಾವಡದಲ್ಲಿರುವ ಸಂಬಂಧಿಯನ್ನು ಭೇಟಿಯಾಗಲು ಬಂದಿದ್ದರು. ಅವರು ಡಿಸೆಂಬರ್ 25 ರಂದು ರೈಲಿನಲ್ಲಿ ನಾವಡ ತಲುಪಿದ ನಂತರ, ಆಕೆಯ ಪತಿ ತನ್ನ ಮೊಬೈಲ್ ಫೋನ್ ಅನ್ನು ರೀಚಾರ್ಜ್ ಮಾಡಲು ಹತ್ತಿರದ ಅಂಗಡಿಗೆ ಹೋಗಿದ್ದರು, ಮಹಿಳೆ ರಸ್ತೆಯಲ್ಲಿ ಕಾಯುತ್ತಿದ್ದರು.

ಅದೇ ಸಮಯದಲ್ಲಿ ಶವಯಾತ್ರೆ ನಡೆಯುತ್ತಿದ್ದರಿಂದ ರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಗಂಡ ಅಂಗಡಿಯಿಂದ ಹಿಂತಿರುಗಿದ ನಂತರ ಆಕೆಯನ್ನು ಹುಡುಕಲಾಗಲಿಲ್ಲ ಎಂದು ನಾವಡದ ಎಸ್‌ಡಿಪಿಒ ಸದರ್ ಅಜಯ್ ಪ್ರಸಾದ್ ಹೇಳಿದರು.

ಪೊಲೀಸರು ಡಿಸೆಂಬರ್ 26 ರಂದು ಖರಿದಿ ಬಿಘಾ ಪ್ರದೇಶದಲ್ಲಿ ಆಕೆಯ ವಿರೂಪಗೊಂಡ ದೇಹವನ್ನು ಪತ್ತೆ ಮಾಡಿದರು. ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಿದ ನಂತರ, ಆರೋಪಿಗಳಲ್ಲಿ ಒಬ್ಬನಾದ ಸುನಿಲ್ ಯಾದವ್ ನನ್ನು ಪತ್ತೆಹಚ್ಚಿ ವಿಚಾರಣೆ ನಡೆಸಲಾಗಿದೆ. ಸಂತ್ರಸ್ತೆಗೆ ಆಮಿಷವೊಡ್ಡಿ ಇ-ರಿಕ್ಷಾದಲ್ಲಿ ಸವಾರಿ ಮಾಡಲು ಕರೆದೊಯ್ದರು. ಈ ಸಮಯದಲ್ಲಿ ಅವರ ನಾಲ್ವರು ಸ್ನೇಹಿತರು ಸಹ ಸೇರಿಕೊಂಡರು. ಅವರು ಮಹಿಳೆಯನ್ನು ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಕೃತ್ಯ ಎಸಗಿದ ಬಳಿಕ ಆಕೆಯ ಕತ್ತು ಸೀಳಿ ಸ್ತನಗಳನ್ನು ಕತ್ತರಿಸಿದ್ದಾರೆ. ನಂತರ ಮೃತದೇಹವನ್ನು ಚರಂಡಿಗೆ ಎಸೆದಿದ್ದಾರೆ ಎಂದು ಪ್ರಸಾದ್ ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read