ʼಹೋಂ ವರ್ಕ್ʼ ಮಾಡಿಲ್ಲವೆಂದು ಶಿಕ್ಷಕನಿಂದ ಥಳಿತ; 7 ವರ್ಷದ ಬಾಲಕ ಸಾವು

ಹೋಂ ವರ್ಕ್ ಮಾಡಿಲ್ಲವೆಂದು 7 ವರ್ಷದ ಬಾಲಕನನ್ನು ಶಿಕ್ಷಕರು ಭೀಕರವಾಗಿ ಥಳಿಸಿದ್ದರಿಂದ ಬಾಲಕ ಸಾವನ್ನಪ್ಪಿದ್ದಾನೆ. ಇಂತಹ ಘಟನೆ ಬಿಹಾರದಲ್ಲಿ ನಡೆದಿದೆ.

ಮಾಧೇಪುರ ಜಿಲ್ಲೆಯ ಭರ್ರಾಹಿ ಗ್ರಾಮದ ನಿವಾಸಿಯಾಗಿರುವ ಮಗುವಿನ ತಂದೆ, ತನ್ನ ಮಗುವನ್ನು ಶಾಲಾ ನಿರ್ದೇಶಕ ಕಮ್ ಶಿಕ್ಷಕರು ನಿರ್ದಯವಾಗಿ ಥಳಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಘಟನೆಯ ನಂತರ ಶಿಕ್ಷಕ ಪರಾರಿಯಾಗಿದ್ದು, ತಲೆಮರೆಸಿಕೊಂಡಿದ್ದಾನೆ.

ವಸತಿ ಶಾಲೆ ನಡೆಸುತ್ತಿರುವ ಶಿಕ್ಷಕರು ನನ್ನ ಮಗನಿಗೆ ಥಳಿಸಿದ್ದಾರೆ ಎಂದು ತಂದೆ ಆರೋಪಿಸಿದ್ದಾರೆ. ನಾನು ಮನೆಗೆ ಬಂದಾಗ ನನ್ನ ಮಗ ಹಾಸಿಗೆಯಲ್ಲಿ ಮಲಗಿದ್ದನ್ನ ನೋಡಿದೆ. ಈ ವೇಳೆ ಅವನ ದೇಹದಲ್ಲಿ ಯಾವುದೇ ಸಂವೇದನೆ ಇರಲಿಲ್ಲ. ಹೀಗಾಗಿ ನಾನು ಅವನನ್ನು ಆಸ್ಪತ್ರೆಗೆ ಕರೆದೊಯ್ದೆ. ಅಲ್ಲಿ ವೈದ್ಯರು ಅವನು ಸತ್ತಿದ್ದಾನೆ ಎಂದು ಘೋಷಿಸಿದರು ಎಂದು ತಂದೆ ಹೇಳಿದರು.

ಶಿಕ್ಷಕನು ತನ್ನ ಮಗನನ್ನು ಕೊಂದಿದ್ದಾನೆ ಎಂದು ಆರೋಪಿಸಿ ತಂದೆ ಸದರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (ಪ್ರಥಮ ಮಾಹಿತಿ ವರದಿ) ದಾಖಲಿಸಿದ್ದಾರೆ.
ಆಸ್ಪತ್ರೆಗೆ ಆಗಮಿಸಿದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಬ್ರಜೇಶ್ ಚೌಹಾಣ್ ಘಟನೆಯನ್ನು ದೃಢಪಡಿಸಿದ್ದು, ಘಟನೆಯಿಂದ ತಲೆಮರೆಸಿಕೊಂಡಿರುವ ಆರೋಪಿಯನ್ನು ಹಿಡಿಯಲು ಪೊಲೀಸರು ಶೋಧ ನಡೆಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read