ಸೂರತ್: ಸೂರತ್ ವಿಮಾನ ನಿಲ್ದಾಣದ ಇತಿಹಾಸದಲ್ಲಿಯೇ ಅತಿ ದೊಡ್ಡ ಚಿನ್ನ ವಶಪಡಿಸಿಕೊಳ್ಳಲಾದ ಪ್ರಮುಖ ಘಟನೆಯಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) 28 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದೆ.
ಸೂರತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇದುವರೆಗಿನ ಅತಿದೊಡ್ಡ ಚಿನ್ನದ ಕಳ್ಳಸಾಗಣೆ ಪ್ರಯತ್ನ ಎಂದು ಹೇಳಲಾಗಿದೆ.
ದುಬೈನಿಂದ ಏರ್ ಇಂಡಿಯಾ ಫ್ಲೈಟ್ IX-174 ರಲ್ಲಿ ಆಗಮಿಸಿದ ಮಧ್ಯವಯಸ್ಕ ಭಾರತೀಯ ದಂಪತಿಗಳ ಮಧ್ಯಭಾಗ ಮತ್ತು ಮೇಲಿನ ಮುಂಡದಲ್ಲಿ ಒಟ್ಟು 28 ಕಿಲೋಗ್ರಾಂಗಳಷ್ಟು ಚಿನ್ನದ ಪೇಸ್ಟ್ ಅನ್ನು ಕಟ್ಟಲಾಗಿತ್ತು. ಪರಿಶೀಲನೆ ವೇಳೆಯಲ್ಲಿ ಗುಜರಾತಿ ನಿವಾಸಿಗಳಾದ ಇಬ್ಬರೂ ಚಿನ್ನದೊಂದಿಗೆ ಸಿಕ್ಕಿಬಿದ್ದರು. ಒಟ್ಟು 16 ಕೆಜಿ ಚಿನ್ನದ ಪೇಸ್ಟ್ ಮಹಿಳೆಯ ಬಳಿ ಮತ್ತು 12 ಕೆಜಿ ಪುರುಷನ ಬಳಿ ಇತ್ತು. ಪೇಸ್ಟ್ ನ ಸಾಂದ್ರತೆಯ ಮಟ್ಟವನ್ನು ಆಧರಿಸಿ, ಅಧಿಕಾರಿಗಳು ಶುದ್ಧ ಚಿನ್ನದ ಇಳುವರಿ 20 ಕೆಜಿಗಿಂತ ಹೆಚ್ಚು ಎಂದು ಅಂದಾಜಿಸಿದ್ದಾರೆ.
ಇದು ವಿಮಾನ ನಿಲ್ದಾಣದ ಇತಿಹಾಸದಲ್ಲಿಯೇ ಅತಿದೊಡ್ಡ ಚಿನ್ನದ ಪೇಸ್ಟ್ ಆಗಿರಬಹುದು ಎಂದು CISF ಮೂಲಗಳು ತಿಳಿಸಿವೆ.