BIGGBOSS-10 : ಟಾಪ್ 2 ನಲ್ಲಿ ಇರಬೇಕಿದ್ದ ಸ್ಪರ್ಧಿಯೇ ‘ಬಿಗ್ ಬಾಸ್’ ಮನೆಯಿಂದ ಹೊರಗೆ..!

ಬೆಂಗಳೂರು : ಬಿಗ್ ಬಾಸ್-10 ಫೈನಲ್ ಹಂತಕ್ಕೆ ಬಂದಿದ್ದು, ಇಂದು ಕಿಚ್ಚ ಸುದೀಪ್ ಬಿಗ್ ಬಾಸ್ ವಿಜೇತರ ಹೆಸರು ಘೋಷಣೆ ಮಾಡಲಿದ್ದಾರೆ.

ಇನ್ನೂ, ಟ್ವಿಸ್ಟ್ ಅಂದರೆ ಟಾಪ್ 2ನಲ್ಲಿ ಇರಲಿದ್ದಾರೆ ಎಂದುಕೊಂಡಿದ್ದ ಸ್ಪರ್ಧಿಯೇ ಬಿಗ್ ಬಾಸ್ ಮನೆಯಿಂದ ಹೊರಗೆ ಬರಲಿದ್ದಾರೆ.

ಕಿಚ್ಚ ಸುದೀಪ್ ಅವರು ಒಂದು ಎನ್ವಲಪ್ನ್ನು ನಮ್ರತಾ ಕೈಗೆ ಕೊಡುತ್ತಾರೆ. ಅದನ್ನು ಕೊಟ್ಟು ಮನೆಯ ಒಳಗೆ ಕಳುಹಿಸುತ್ತಾರೆ. ಈ ಎನ್ವಲಪ್ನಲ್ಲಿ ಈಗ ಹೊರಗಡೆ ಆಗುವ ಸ್ಪರ್ಧಿಯ ಹೆಸರಿದೆ ಎನ್ನುತ್ತಾರೆ ಕಿಚ್ಚ ಸುದೀಪ್. ನಮ್ರತಾ ಲೆಟರ್ ಓದಿ ‘ ಟಾಪ್ 2ನಲ್ಲಿ ಇರಲಿದ್ದಾರೆ ಎಂದುಕೊಂಡಿದ್ದ ಸ್ಪರ್ಧಿಯೇ ಬಿಗ್ ಬಾಸ್ ಮನೆಯಿಂದ ಹೊರಬರಲಿದ್ದಾರೆ ಎಂದು ಹೇಳಿ ಆ ಸ್ಪರ್ಧಿಯ ಹೆಸರು ಹೇಳುತ್ತಾರೆ. ಹರಿದಾಡುತ್ತಿರುವ ಈ ಪ್ರೋಮೋ ಬಿಗ್ ಬಾಸ್ ಪ್ರೇಕ್ಷಕರಲ್ಲಿ ಬಹಳ ಕುತೂಹಲ ಮೂಡಿಸಿದೆ. ವರ್ತೂರು ಸಂತೋಷ್, ಡ್ರೋನ್ ಪ್ರತಾಪ್, ಕಾರ್ತಿಕ್, ವಿನಯ್, ಸಂಗೀತಾ ಶೃಂಗೇರಿ.ಈ ಐವರ ಪೈಕಿ ಯಾರು ಮನೆಯಿಂದ ಹೊರಗಡೆ ಬರಲಿದ್ದಾರೆ ಎಂಬುದು ಬಹಳ ಕುತೂಹಲಕಾರಿಯಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read