BIGG NEWS : ರಾಜ್ಯ ಸರ್ಕಾರದಿಂದ 2024ನೇ ಸಾಲಿನ ‘ಸಾರ್ವತ್ರಿಕ ರಜೆ- ಪರಿಮಿತ ರಜೆʼ ಗಳ ಅಧಿಕೃತ ಪಟ್ಟಿ ಬಿಡುಗಡೆ : ಇಲ್ಲಿದೆ ಸಂಪೂರ್ಣ ಪಟ್ಟಿ

ಬೆಂಗಳೂರು: ಮುಂದಿನ ವರ್ಷ ಅಂದರೆ 2024ನೇ ಸಾಲಿನಲ್ಲಿ ಒಟ್ಟು 21 ದಿನಗಳನ್ನು ಸಾರ್ವತ್ರಿಕ ರಜಾ ದಿನವನ್ನಾಗಿ ಕರ್ನಾಟಕ ಸರ್ಕಾರ ಘೋಷಿಸಿದೆ. ಈ ದಿನಗಳಲ್ಲಿ ಪ್ರಮುಖ ಹಬ್ಬಗಳು, ಗಣ್ಯರ ಜಯಂತಿಗಳು ಇರಲಿವೆ. ಸರ್ಕಾರ ಮಂಜೂರು ಮಾಡಿರುವ ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಇಲ್ಲಿದೆ.

ರಾಜ್ಯ ಸರ್ಕಾರವು 2024ನೇ ಸಾಲಿಗೆ ಮಂಜೂರು ಮಾಡಿರುವ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ಸಾರ್ವಜನಿಕ ಮಾಹಿತಿಗಾಗಿ ಈ ಕೆಳಕಂಡಂತೆ ಪ್ರಕಟಿಸಲಾಗಿದೆ.

ಎಲ್ಲಾ ಎರಡನೇ ಶನಿವಾರ, ನಾಲ್ಕನೇ ಶನಿವಾರ ಮತ್ತು ಭಾನುವಾರಗಳು ಹಾಗೂ ಈ ಕೆಳಕಂಡ ದಿನಗಳು

ಸಾರ್ವತ್ರಿಕ ರಜಾ ದಿನಗಳು

15.01.2024-ಸೋಮವಾರ : ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ

26.01.2024- ಶುಕ್ರವಾರ : ಗಣರಾಜ್ಯೋತ್ಸವ

08.03.2024- ಶುಕ್ರವಾರ :ಮಹಾ ಶಿವರಾತ್ರಿ

29.03.2024- ಶುಕ್ರವಾರ : ಗುಡ್ ಪ್ರೈಡೆ

09.04.2024-‌ ಮಂಗಳವಾರ : ಯುಗಾದಿ ಹಬ್ಬ

11.04.2024- ಗುರುವಾರ : ಕುತುಬ್‌ ಎ ರಂಜಾನ್

01.05.2024- ಬುಧವಾರ : ಕಾರ್ಮಿಕ ದಿನಾಚರಣೆ

10.05.2024-ಶುಕ್ರವಾರ : ಬಸವ ಜಯಂತಿ/ಅಕ್ಷಯ ತೃತೀಯ

17.06.2024-ಸೋಮವಾರ-ಬಕ್ರೀದ್

17.07,2024-ಬುಧವಾರ : ಮೊಹರಂ ಕಡೇ ದಿನ

15.08.2024- ಗುರುವಾರ :ಸ್ವಾತಂತ್ರ ದಿನಾಚರಣೆ

07.09.2024- ಶನಿವಾರ : ವರಸಿದ್ಧಿ ವಿನಾಯಕ ವ್ರತ

16.09.2024-ಸೋಮವಾರ : ಈದ್‌ ಮಿಲಾದ್

02.10.2024-‌ ಬುಧವಾರ : ಗಾಂಧಿ ಜಯಂತಿ/ ಮಹಾಲಯ ಅಮವಾಸ್ಯೆ

11.10.2024- ಶುಕ್ರವಾರ : ಮಹಾನವಮಿ ಆಯುಧಪೂಜೆ

17.10.2024- ಗುರುವಾರ : ಮಹರ್ಷಿ ವಾಲ್ಮೀಕಿ ಜಯಂತಿ

31.10.2024- ಗುರುವಾರ : ನರಕ ಚತುರ್ಶಿ

01.11.2024 –ಶುಕ್ರವಾರ : ಕನ್ನಡ ರಾಜ್ಯೋತ್ಸವ

02.11.2024 –ಶನಿವಾರ : ಬಲಿಪಾಡ್ಯಮಿ, ದೀಪಾವಳಿ

18.11.2024- ಸೋಮವಾರ : ಕನಕದಾಸ ಜಯಂತಿ

25.12.2024-ಬುಧವಾರ : ಕ್ರಿಸ್ ಮಸ್

ಸೂಚನೆ:

  1. ಈ ರಜಾ ಪಟ್ಟಿಯಲ್ಲಿ ಭಾನುವಾರಗಳಂದು ಬರುವ ಡಾ|| ಬಿ. ಆರ್. ಅಂಬೇಡ್ಕರ್ ಜಯಂತಿ (14.04.2024) ಮತ್ತು ಮಹಾವೀರ ಜಯಂತಿ (21.04.2024) ಹಾಗೂ ಎರಡನೇ ಶನಿವಾರದಂದು ಬರುವ ವಿಜಯದಶಮಿ (12.10.2024) ಈ ರಜೆ ಪಟ್ಟಿಯಲ್ಲಿ ನಮೂದಿಸಿರುವುದಿಲ್ಲ.
  2. ಸಾರ್ವತ್ರಿಕ ರಜಾ ದಿನಗಳಲ್ಲಿ ರಾಜ್ಯಾದ್ಯಂತ ಸರ್ಕಾರಿ ಕಛೇರಿಗಳು ಮುಚ್ಚಲ್ಪಡುತ್ತವೆ. ಕಛೇರಿಯ ಜರೂರು ಕೆಲಸವನ್ನು ವಿಲೇವಾರಿ ಮಾಡುವ ಬಗ್ಗೆ ಇಲಾಖಾ ಮುಖ್ಯಸ್ಥರುಗಳು ಸೂಕ್ತ ವ್ಯವಸ್ಥೆ ಮಾಡತಕ್ಕದ್ದು.
  3. ಈ ಪಟ್ಟಿಯಲ್ಲಿ ಸೇರಿಸಲಾಗಿರುವ ಮುಸಲ್ಮಾನ ಬಾಂಧವರ ಹಬ್ಬಗಳು ನಿಗಧಿತ ದಿನಾಂಕದಂದು ಬೀಳದಿದ್ದರೆ ಸರ್ಕಾರಿ ಸೇವೆಯಲ್ಲಿರುವ ಮುಸಲ್ಮಾನ ಬಾಂಧವರಿಗೆ ನಿಗಧಿತ ರಜೆಗೆ ಬದಲಾಗಿ ಹಬ್ಬದ ದಿವಸ ರಜಾ ಮಂಜೂರು ಮಾಡಬಹುದು.
  4. ದಿನಾಂಕ:03.09.2024 (ಮಂಗಳವಾರ) ಕೈಲ್ ಮೂಹೂರ್ತ, ದಿನಾಂಕ:17.10.2024 (ಗುರುವಾರ) ತುಲಾ ಸಂಕ್ರಮಣ ಹಾಗೂ ದಿನಾಂಕ:14.12.2024 (ಶನಿವಾರ) ಹುತ್ತರಿ ಹಬ್ಬವನ್ನು ಆಚರಿಸಲು ಕೊಡಗು ಜಿಲ್ಲೆಗೆ ಮಾತ್ರ ಅನ್ವಯವಾಗುವಂತೆ ಸ್ಥಳೀಯ ಸಾರ್ವತ್ರಿಕ ರಜೆಯನ್ನು ಘೋಷಿಸಿದೆ.

2024 ನೇ ವರ್ಷಕ್ಕೆ ರಾಜ್ಯ ಸರ್ಕಾರಿ ನೌಕರರಿಗೆ ಇರುವ ಪರಿಮಿತ ರಜೆ ದಿನಗಳ ಪಟ್ಟಿ

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read