BIGG NEWS : ದೇಶದ ಹೆಸರು ಮರುನಾಮಕರಣ : ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಹತ್ವದ ಹೇಳಿಕೆ

ಹುಬ್ಬಳ್ಳಿ : ದೇಶದ ಹೆಸರು ಭಾರತ್ ಎಂದು ಮರನಾಮಕರಣದ ವಿಚಾರದ ಕುರಿತಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಹತ್ವದ ಹೇಳಿಕೆ ನೀಡಿದ್ದು, ದೇಶದ ಹೆಸರು ಬದಲಾವಣೆ ಮಾಡುತ್ತೇವೆ ಎಂಬುದಾಗಿ ನಾವು ಎಲ್ಲೂ ಹೇಳಿಲ್ಲ ಎಂದು ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಭಾರತ್ ಎಂದು ಮರುನಾಮಕರಣ ಮಾಡುತ್ತೇವೆ ಎಂಬುದಾಗಿ ಎಲ್ಲೂ ಹೇಳಿಲ್ಲ. ಭಯ ಇದ್ದವರು ಹೀಗೆ ಮಾತನಾಡುತ್ತಿದ್ದಾರೆ. ನಾವು ಭಾರತ ಎಂದು ಕರೆಯುತ್ತೇವೆ. ನಿಮಗೆ ಹೇಗೆ ಬೇಕೋ ಹಾಗೆ ನೀವು ಕರೆಯಬಹುದು ಎಂದು ಸ್ಪಷ್ಟನೆ ನೀಡಿದ್ದಾರೆ.

ಈಗ ಜಗತ್ತಿನ ನಾಯಕತ್ವದಲ್ಲಿ ಭಾರತ ಕೂಡ ಇದೆ. ಪ್ರಮುಖ ದೇಶಗಳ ಜೊತೆ ನಾವಿರುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾಗ ಅಪಹಾಸ್ಯ ಮಾಡಿದರು. ಈಗ ನಾವೆಲ್ಲರೂ ನಾಯಕತ್ವ ಕಣ್ಮುಂದೆ ನೋಡಿದ್ದೇವೆ ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read