BIGG NEWS : ರಾಜ್ಯ ಸರ್ಕಾರದಿಂದ `ಅನಧಿಕೃತ ಶಾಲೆ’ಗಳ ವಿರುದ್ಧ ಮಹತ್ವದ ಕ್ರಮ

ಬೆಂಗಳೂರು : 2022-23ನೇ ಸಾಲಿನಲ್ಲಿ ರಾಜ್ಯದಲ್ಲಿ ಅನಧಿಕೃತವಾಗಿ ನಡೆಸುತ್ತಿರುವಂತಹ ಶಾಲೆಗಳ ವಿರುದ್ಧ ಕ್ರಮವಹಿಸುವ ಕುರಿತು ರಾಜ್ಯ ಸರ್ಕಾರವು ಮಹತ್ವದ ಕ್ರಮಗಳನ್ನು ಕೈಗೊಂಡಿದೆ.

ರಾಜ್ಯದಲ್ಲಿನ ಕೆಲವು ಖಾಸಗಿ ಶಾಲಾ ಆಡಳಿತ ಮಂಡಳಿಗಳು ಕರ್ನಾಟಕ ಶಿಕ್ಷಣ ಕಾಯಿದೆ-1983 ಸೆಕ್ಷನ್-30, 31 ರ ಪ್ರಕಾರ ಶಿಕ್ಷಣ ಇಲಾಖಾ ವತಿಯಿಂದ ಯಾವುದೇ ನೋಂದಣಿಯನ್ನು ಪಡೆಯದ ಅನಧಿಕೃತವಾಗಿ ಶಾಲೆಗಳನ್ನು ನಡೆಸುತ್ತಿರುವುದಕ್ಕೆ ಸಂಬಂಧಪಟ್ಟಂತೆ ನಿಮ್ಮ ಜಿಲ್ಲೆಯಲ್ಲಿ ಕೆಳಕಂಡಂತೆ ಅಂದರೆ *ನೋಂದಣಿಯನ್ನು ಪಡೆಯದೆ ಅನಧಿಕೃತವಾಗಿ ಶಾಲೆ ನಡೆಸುತ್ತಿರುವುದು, “ನೋಂದಣಿ ಇಲ್ಲದೆ ಉನ್ನತೀಕರಿಸಿದ ತರಗತಿಗಳನ್ನು ನಡೆಸುತ್ತಿರುವುದು, *ಅನಧಿಕೃತ ಪಠ್ಯಕ್ರಮ,ಮತ್ತು ಅನಧಿಕೃತ ಪಠ್ಯಪುಸ್ತಕ ಬೋಧಿಸುತ್ತಿರುವುದು, *ಕೇಂದ್ರ ಪಠ್ಯಕ್ರಮಕ್ಕೆ ಸಂಯೋಜಿಸಿದ ನಂತರವೂ ರಾಜ್ಯ ಪಠ್ಯಕ್ರಮದ ಶಾಲೆ ನಡೆಸುತ್ತಿರುವುದು ಅತ್ಯಂತ ಆಕ್ಷೇಪಾರ್ಹ/ ನಿಯಮಬಾಹಿರವಾಗಿರುತ್ತದೆ. ಸೇರಿದಂತೆ ಇಂತಹ ಪುಕರಣಗಳಿಗೆ ಉಲ್ಲೇಖಿತ (4)ರಲ್ಲಿ ಸರ್ಕಾರವು ಪ್ರಕರಣಗಳವಾರು 45 ದಿನಗಳ ಕಾಲಾವಕಾಶ ನೀಡಲಾಗಿತ್ತು.

ದಿನಾಂಕ:20-6-2023 ಮತ್ತು ದಿನಾಂಕ:01-07-2023 ರಲ್ಲಿ ಆಡಳಿತ ಮಂಡಳಿಗಳಿಗೆ 45 ದಿನಗಳ ಕಾಲಾವಕಾಶವನ್ನು ನೀಡಿ 2023-24ನೇ ಶೈಕ್ಷಣಿಕ ಸಾಲಿನ ದಾಖಲಾತಿ ಪ್ರಾರಂಭಾವಾಗುವ ಮುನ್ನವ ತಕ್ಷಣ ನಿಯಮಾನುಸಾರ ಕ್ರಮವಹಿಸುವಂತೆಯೂ ಹಾಗೂ ನಂತರದಲ್ಲಿ ಮುಂದುವರೆಸಿದ್ದಲ್ಲಿ ಅಂತಹ ಶಾಲೆಗಳಿಗೆ ಪೋಷಕರು ಮಕ್ಕಳನ್ನು ದಾಖಲಿಸದಂತೆ ಸಾರ್ವಜನಿಕವಾಗಿ ಪ್ರಕಟಣೆಯನ್ನು ನೀಡುವ ಕುರಿತು ಕ್ರಮವಹಿಸಿ ಎಸ್.ಎ.ಟಿ.ಎಸ್.ನಲ್ಲಿ ಇಂದೀಕರಿಸುವುದನ್ನು ನಿರ್ಬಂಧಿಸಿ ಜಿಲ್ಲಾ ಮಾಹಿತಿಯನ್ನು ಕ್ರೋಢೀಕರಿಸಿ ನೋಂದಣಿ/ರದ್ದತಿ ಪ್ರಾಧಿಕಾರಿಯಾಗಿರುವ ಉಪನಿರ್ದೇಶಕರು (ಆಡಳಿತ) ರವರುಗಳು ದಿನಾಂಕ:25-5-2023 ರೊಳಗೆ ಎಲ್ಲಾ ದಾಖಲೆಗಳೊಂದಿಗೆ ಈ ಆಯುಕ್ತಾಲಯಕ್ಕೆ ಸಲ್ಲಿಸುವಂತೆ ಸೂಚಿಸಲಾಗಿತ್ತು.

ಅನಧಿಕೃತ ಶಾಲೆಗಳಿದ್ದರೂ ಇಲಾಖೆಯು ರಾಜ್ಯದಲ್ಲಿನ ಅನಧಿಕೃತ ಶಾಲೆಗಳಿಗೆ ಸಂಬಂಧಪಟ್ಟಂತೆ ದಿನಪತ್ರಿಕೆಯಲ್ಲಿ 1300 ಕ್ರಮವಹಿಸಿರುವುದಿಲ್ಲವೆಂದು ಪಕಟವಾಗಿರುವ ಹಿನ್ನೆಲೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿಗಳು ಅನುಪಾಲನಾ ವರದಿಯನ್ನು ಸಲ್ಲಿಸುವಂತೆ ಉಲ್ಲೇಖಿತ (7)ರ ಟಿಪ್ಪಣಿಯಲ್ಲಿ ಸೂಚಿಸಿರುತ್ತಾರೆ.

ಈ ಕುರಿತಂತ ರಾಜ್ಯದಲ್ಲಿನ ಅನಧಿಕೃತ ಶಾಲೆಗಳ ಬಗ್ಗೆ ಜಿಲ್ಲೆಗಳಲ್ಲಿ ಅನುಪಾಲನೆಯಾಗಿರುವ ಬಗ್ಗೆ ಪರಿಶೀಲಿಸಿದ ಸಂದರ್ಭದಲ್ಲಿ ಉಪನಿರ್ದೇಶಕರುಗಳಿಂದ ಈ ಕಛೇರಿಗೆ ಕೇವಲ 16 ಜಿಲ್ಲೆಗಳು ಮಾತ್ರ ಮಾಹಿತಿ ನೀಡಿದ್ದು ಉಳಿದವರು ಯಾವುದೇ ಮಾಹಿತಿ ನೀಡಿರುವುದಿಲ್ಲ ಮಾಹಿತಿ ನಿಡಿರುವವರೂ ಸಹ ನಿಖರವಾದ ಮಾಹಿತಿ ಸಲ್ಲಿಕೆಯಾಗಿರುವುದಿಲ್ಲ. ಖಾಸಗಿ ಶಾಲಾ ನೋಂದಣಿ/ಮಾನತ ಪ್ರಾಧಿಕಾರಿಗಳಾದ ನೀವುಗಳು ಮಕ್ಕಳ ಶೈಕ್ಷಣಿಕ ಭವಿಷ್ಯದ ಬಗ್ಗೆ ನಿರ್ಲಕ್ಷತೆ ತೊರುತ್ತಿರುವುದು ಇಂತಹ ಶಾಲೆಗಳ ವಿರುದ್ಧ ಕ್ರಮಕೈಗೊಳ್ಳದಿರುವುದು, ಪತ್ರಿಕಾ ಪ್ರಕಟಣೆ ನೀಡದಿರುವುದು ಇಲಾಖೆಯನ್ನು ಮುಜುಗರಗಿಡಾಗಿದ ತಕ್ಷಣ ವೈಯಕ್ತಿಕ ಗಮನಹರಿಸಿ ಕೆಳಕಂಡಂತೆ ಕ್ರಮವಹಿಸಲು ಸೂಚಿಸಿದೆ.

 

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read