BIGG NEWS : ರಾಜ್ಯ ಸರ್ಕಾರದಿಂದ ʻಪರಿಸರ ಸೂಕ್ಷ್ಮವಲಯ ವ್ಯಾಪ್ತಿ ಮರುನಿಗದಿʼಗೆ ಸಿದ್ಧತೆ

ಬೆಂಗಳೂರು : ರಾಜ್ಯ ಸರ್ಕಾರವು ಪರಿಸರ ಸೂಕ್ಷ್ಮವಲಯ ವ್ಯಾಪ್ತಿ ಮರುನಿಗದಿಗೆ ಸಿದ್ಧತೆ ನಡೆಸಿದ್ದು, ಕಸ್ತೂರಿ ರಂಗನ್ ವರದಿಯಲ್ಲಿನ ವ್ಯಾಪ್ತಿ ಪರಿಶೀಲಿಸಿ, ಜನಜೀವನಕ್ಕೆ ಧಕ್ಕೆಯಾಗದಂತಹ ಪ್ರದೇಶಗಳನ್ನು ಪಟ್ಟಿ ಮಾಡಿ ಸಲ್ಲಿಸಲು ನಿರ್ಧರಿಸಿದೆ.

ಈ ಕುರಿತು ಸಚಿವ ಈಶ್ವರ್‌ ಖಂಡ್ರೆ ಮಾಹಿತಿ ನೀಡಿದ್ದು, ಕಸ್ತೂರಿ ರಂಗನ್ ವರದಿಯಲ್ಲಿನ ವ್ಯಾಪ್ತಿ ಪರಿಶೀಲಿಸಿ, ಜನಜೀವನಕ್ಕೆ ಧಕ್ಕೆಯಾಗದಂತಹ ಪ್ರದೇಶಗಳನ್ನು ಪಟ್ಟಿ ಮಾಡಿ ಸಲ್ಲಿಸುವುದು ರಾಜ್ಯದ ಕರ್ತವ್ಯ. ಜೀವ ಸಂಕುಲ, ಜನರ ಬದುಕನ್ನು ಗಮನದಲ್ಲಿ ಇಟ್ಟುಕೊಂಡು ಸಂಪುಟ ಉಪ ಸಮಿತಿ ರಚಿಸಿ ಚರ್ಚಿಸಿ, ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಪಶ್ಚಿಮಘಟ್ಟ ಹಲವು ನದಿಮೂಲಗಳನ್ನು ಒಳಗೊಂಡ ಜೀವ ವೈವಿಧ್ಯದ ಅಮೂಲ್ಯ ತಾಣ. ಪಾರಂಪರಿಕವಾದ ಅಲ್ಲಿನ ಜನಜೀವನವೂ ಅಷ್ಟೇ ಮುಖ್ಯ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read