BIGG NEWS : ಮುಂದಿನ ಸಲ ದೇಶದ ಚುಕ್ಕಾಣಿ ಮಹಿಳೆಯ ಕೈಗೆ ಹೋಗೋದು ಶತಃಸಿದ್ದ : ಡಾ.ಯಶವಂತ ಗುರೂಜಿ ಸ್ಪೋಟಕ ಭವಿಷ್ಯ!

ತುಮಕೂರು : ರಾಷ್ಟ್ರರಾಜಕಾರಣದ ಕುರಿತಂತೆ ಕಾಲಜ್ಞಾನಿ ಡಾ.ಯಶವಂತ ಗುರೂಜಿ ಸ್ಪೋಟಕ ಭವಿಷ್ಯ ನುಡಿದಿದ್ದು, ಮುಂದಿನ ಬಾರಿ ಭಾರತ ದೇಶದ ಚುಕ್ಕಾಣಿ ಮಹಿಳೆಯ ಕೈಗೆ ಹೋಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಶಿವರಾತ್ರಿ ಬಳಿಕ ರಾಷ್ಟ್ರ ರಾಜಕಾರಣದಲ್ಲಿ ಭಾರೀ ಬದಲಾವಣೆ ಸಂಭವಿಸಲಿದೆ. ಮುಂದಿನ ವರ್ಷದ ಮಾರ್ಚ್ ತಿಂಗಳ ಬಳಿಕ ದೇಶದ ಚುಕ್ಕಾಣಿ ಮಹಿಳೆಯ ಕೈಗೆ ಹೋಗಲಿದೆ. ಇಂದಿರಾ ಗಾಂಧಿ ಬಳಿಕ ರಾಷ್ಟ್ರ ರಾಜಕಾರಣದ ಚುಕ್ಕಾಣಿಯನ್ನು ಈ ಬಾರಿ ಮಹಿಳೆ ಹಿಡಿಯಲಿದ್ದಾಳೆ. ಮಹಾಶಿವರಾತ್ರಿ ಹಬ್ಬದ ಬಳಿಕ ಶಕ್ತಿ ಸ್ವರೂಪವಾದ ಮಹಿಳೆ ದೇಶವನ್ನು ಆಳ್ತಾಳೆ ಎಂದು ಕಾಲಜ್ಞಾನದ ಭವಿಷ್ಯವಾಣಿ ಭವಿಷ್ಯವನ್ನು ಹೇಳುತ್ತಿದೆ ಎಂದಿದ್ದಾರೆ.

ಕಾಲಜ್ಞಾನ ಭವಿಷ್ಯದ ಪ್ರಕಾರ ಒಂದು ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಿಲ್ಲ. ಅತಂತ್ರ ಪರಿಸ್ಥಿತಿ ಆಗುತ್ತದೆ. ಮಿತ್ರಪಕ್ಷಗಳ ಸಹಾಯದಿಂದ ಒಂದು ಪಕ್ಷ ಅಧಿಕಾರಕ್ಕೆ ಬರುತ್ತದೆ. ಪ್ರಧಾನಿ ಯೋಗವಿರುವ ಸ್ತ್ರೀ ಯಾರೆಂದು ಮಕರ ಸಂಕ್ರಾಂತಿಯಂದು ಹೇಳಲಾಗುತ್ತದೆ ಎಂದು ಭವಿಷ್ಯವನ್ನು ನುಡಿದಿದ್ದಾರೆ.

ಇನ್ನು ಕಳೆದ ಬಾರಿಯ ವಿಧಾನಸಭೆ ಚುನಾವಣೆ ಮುಂಚಿತವಾಗಿಯೇ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಬಹುಮತದಿಂದ ಅಧಿಕಾರಕ್ಕೆ ಬರಲಿದ್ದು, ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read