BIGG NEWS : ಇನ್ಮುಂದೆ `CBSE’ ಶಾಲೆಗಳಲ್ಲಿ ಕನ್ನಡ ಮೀಡಿಯಂ : ಕೇಂದ್ರ ಸರ್ಕಾರದಿಂದ ಮಹತ್ವದ ಸೂಚನೆ

ಬೆಂಗಳೂರು : ಇಂಗ್ಲಿಷ್ ಪಠ್ಯಕ್ರಮವನ್ನು ಹೊಂದಿರುವ ಸಿಬಿಎಸ್ ಇ ಶಾಲೆಗಳಲ್ಲಿ ಕನ್ನಡ ಸೇರಿದಂತೆ ಸ್ಥಳೀಯ ಭಾಷೆಗಳಲ್ಲಿ ಶಿಕ್ಷಣ ನೀಡಲು ಕೇಂದ್ರ ಸರ್ಕಾರ ಪ್ರೌಢಶಿಕ್ಷಣ ಮಂಡಳಿ ಶಾಲೆಗಳಿಗೆ ಮಹತ್ವದ ಸೂಚನೆ ನೀಡಿದೆ.

ಹೌದು, ನೂತನ ರಾಷ್ಟ್ರೀಯ ಶಿಕ್ಷಣ ನೀತಿ (NEP) ಅಡಿ 2024ರ ಶೈಕ್ಷಣಿಕ ಸಾಲಿನಿಂದ ಕನ್ನಡ ಸೇರಿದಂತೆ ಸ್ಥಳೀಯ ಭಾಷೆಗಳ ಮಾಧ್ಯಮಗಳಲ್ಲೂ ಸಿಬಿಎಸ್ ಇ ಶಿಕ್ಷಣ ನೀಡಬಹುದಾಗಿದೆ ಎಂದು ಕೇಂದ್ರೀಯ ಪಠ್ಯಕ್ರಮದ  ಅಧೀನದ ಶಾಲೆಗಳಿಗೆ ಸೂಚಿಸಿದೆ.

ಸಿಬಿಎಸ್ ಇ ಶಾಲೆಗಳಲ್ಲಿ ಈವರೆಗೆ ಇಂಗ್ಲಿಷ್ ಮಾಧ್ಯಮದಲ್ಲಿ ಮಾತ್ರ ಪಠ್ಯಕ್ರಮಗಳು ಇದ್ದವು, ಇದೀಗ ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲಿ ಸಿಬಿಎಸ್ ಇ ಮಾಧ್ಯಮದಲ್ಲಿ ಪಠ್ಯಕ್ರಮ ಬೋಧಿಸಬಹುದು. ಈ ಬಗ್ಗೆ ಸಿಬಿಎಸ್ ಇ ಶಾಲೆಗಳಿಗೆ ಪತ್ರ ಬರೆದಿದ್ದು, ಶಾಲೆಗಳು ತಮ್ಮಲ್ಲಿನ ಲಭ್ಯ ಸಂಪನ್ಮೂಲ ಬಳಸಿಕೊಂಡು ತಜ್ಞರ ಸಂಪರ್ಕಿಸಿ ಪ್ರಾದೇಶಿಕ ಭಾಷೆಗಳಲ್ಲಿ ಸಿಬಿಎಸ್ ಇ ಶಿಕ್ಷಣ ನೀಡಬಹುದು ಎಂದು ಹೇಳಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read