BIGG NEWS : ‘HSRP’ ನಂಬರ್ ಪ್ಲೇಟ್ ಅಳವಡಿಕೆಗೆ ಫೆ. 17 ರವರೆಗೆ ಅವಧಿ ವಿಸ್ತರಣೆ : ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ

 

ಬೆಂಗಳೂರು :  2019ರ  ಏಪ್ರಿಲ್ 1ಕ್ಕಿಂತ  ಮೊದಲು ನೊಂದಾಯಿಸಲಾದ ಎಲ್ಲಾ ವಾಹನಗಳು 2024 ಫೆಬ್ರವರಿ 17ರ ಒಳಗಾಗಿ ಹೈ-ಸೆಕ್ಯೂರಿಟಿ ನಂಬರ್ ಪ್ಲೇಟ್‍ಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳುವ ದಿನಾಂಕವನ್ನು ಫೆಬ್ರವರಿ 17 ರವರೆಗೆ ವಿಸ್ತರಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

2019ರ ಏಪ್ರಿಲ್  ಕ್ಕಿಂತ ಮೊದಲು ನೋಂದಣಿ ಮಾಡಿಸಿಕೊಂಡ ದ್ವಿಚಕ್ರ ವಾಹನ, ತ್ರಿಚಕ್ರ ವಾಹನ, ಲಘು ಮೋಟಾರು ವಾಹನ, ಮಧ್ಯಮ ಮತ್ತು ಬಾರಿ ವಾಣಿಜ್ಯ ವಾಹನಗಳು, ಟ್ರ್ಯಾಕ್ಟರ್, ಪ್ರಯಾಣಿಕರ ಕಾರು ಸೇರಿ ಎಲ್ಲ ಹಳೆಯ ವಾಹನಗಳಿಗೆ ಈ ನಿಯಮ ಅನ್ವಯವಾಗಲಿದೆ. ವಾಹನ ಮಾಲಿಕರು ಆನ್‍ಲೈನ್ ವೆಬ್‍ಸೈಟ್ ಗೆ ಭೇಟಿ ನೀಡಿ ನೊಂದಾಯಿಸಿ ಆನ್ ಲೈನ್ ಮೂಲಕವೇ ಹೆಚ್.ಎಸ್.ಆರ್.ಪಿ ಶುಲ್ಕವನ್ನು ಪಾವತಿಸಿ ನಂತರ ವಾಹನ ಡೀಲರ್ ಬಳಿ ನಂಬರ್ ಪ್ಲೇಟ್‍ಗಳನ್ನು ಅಳವಡಿಸಿಕೊಳ್ಳಬೇಕು.

ಹೆಚ್.ಎಸ್.ಆರ್.ಪಿ  ಎಂಬುದು ವಾಹನಗಳ ನೋಂದಣಿ ನಂಬರ್ ಪ್ಲೇಟ್ ಆಗಿದ್ದು, ಅಲ್ಯೂಮಿನಿಯಂ ಲೋಹದಲ್ಲಿ ತಯಾರಿಸಲಾಗಿದ್ದು, ಇದರಲ್ಲಿ ಲೇಸóರ್ ಕೋಡ್ ಇದ್ದು ಸ್ಕ್ಯಾನ್ ಮಾಡಿದಾಗ ವಾಹನದ ಸಂಪೂರ್ಣ ಮಾಹಿತಿ ಹಾಗೂ ಅಶೋಕಚಕ್ರದ ಚಿತ್ರವನ್ನು ಒಳಗೊಂಡಿದೆ. ನಕಲಿ ನಂಬರ್ ಪ್ಲೇಟ್ ಅಳವಡಿಸುವುದನ್ನು ತಪ್ಪಿಸಲು ಈ ಕ್ರಮ ತೆಗೆದುಕೊಳ್ಳಲಾಗುತ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read