BIGG NEWS : ಹವಾಮಾನ ಬದಲಾವಣೆ ಪರಿಣಾಮ : ಕರ್ನಾಟಕದ `ಕುಣಿವೆ ಕಪ್ಪೆಗಳು’ ಅಪಾಯದಂಚಿಗೆ!

ಬೆಂಗಳೂರು : ಜಾಗತಿಕ ಹವಾಮಾನ ಬದಲಾವಣೆ  ಪರಿಣಾಮ ಕರ್ನಾಟಕದ ಕುಣಿವೆ ಕಪ್ಪೆಗಳ ಪ್ರಬೇಧಗಳಲ್ಲಿ 2 ವಿನಾಶದಂಚಿಗೆ ತಲುಪಿವೆ ಎಂದು ನೇಚರ್ ವೈಚ್ಞಾನಿಕ ಪತ್ರಿಕೆಯ ಅಧ್ಯಯನ ವರದಿ ತಿಳಿಸಿದೆ.

ಜಾಗತಿಕ ಹವಾಮಾನ ಬದಲಾವಣೆ ಕಾರಣಕ್ಕಾಗಿ 2004ರಿಂದ 2022ರ ಅವಧಿಯಲ್ಲಿ ಜಾಗತಿಕವಾಗಿ 300ಕ್ಕೂ ಹೆಚ್ಚು ಉಭಯಜೀವಿಗಳು ವಿನಾಶದಂಚಿಗೆ ತಲುಪಿವೆ. ಕರ್ನಾಟಕದಲ್ಲಿ ಮಾತ್ರ ಕಂಡುಬರುವ ‘ಕುಣಿವ ಕಪ್ಪೆ’ಗಳ 24 ಪ್ರಬೇಧಗಳಲ್ಲಿ 2 ವಿನಾಶದಂಚಿಗೆ ತಲುಪಿದ್ದರೆ, 15 ಪ್ರಬೇಧಗಳು ಅಪಾಯದ ಸ್ಥಿತಿಯಲ್ಲಿವೆ ಎಂದು ನೇಚರ್‌ ವೈಜ್ಞಾನಿಕ ಪತ್ರಿಕೆಯಲ್ಲಿ ಅಧ್ಯಯನ ವರದಿ ಪ್ರಕಟಗೊಂಡಿದೆ.

ಕಪ್ಪೆಗಳು ನಾಶಗೊಂಡರೆ ಜೀವವೈವಿಧ್ಯದಲ್ಲಿ ಏರುಪೇರಾಗಲಿದೆ. ಜೀವ ಪ್ರಭೇದಗಳನ್ನು ಉಳಿಸುವ ನಿಟ್ಟಿನಲ್ಲಿ, ಜಾಗತಿಕ ತಾಪಮಾನವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರ ಕೊಡುಗೆ ಅಮೂಲ್ಯವಾಗಿದೆ. ಇಂಗಾಲದ ಡೈ ಆಕ್ಸೈಡ್‌ಅನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಎಲ್ಲರೂ ಕೈಜೊಡಿಸಬೇಕಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read