BIGG NEWS : ಗರ್ಭಿಣಿ ಪತ್ನಿಯ ಹತ್ಯೆಗೆ ಪತಿಯಿಂದಲೇ ಸ್ಕೆಚ್ : 6 ತಿಂಗಳ ಬಳಿಕ ಬಯಲಾಯ್ತು ಸ್ಪೋಟಕ ಸತ್ಯ

ಬೆಂಗಳೂರು : ಬೆಂಗಳೂರಿನಲ್ಲಿ ಭಯಾನಕ ಹತ್ಯೆ ಯತ್ನ ಪ್ರಕರಣ ನಡೆದಿದ್ದು, ನಾಲ್ಕು ತಿಂಗಳ ಗರ್ಭಿಣಿ ಪತ್ನಿಯನ್ನು ಪತಿಯೇ ತನ್ನ ಸ್ನೇಹಿತ ಜೊತೆಗೆ ಸೇರಿ ಕೊಲೆ ಮಾಡಲು ಯತ್ನಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಒಂದೂವರೆ ವರ್ಷದ ಹಿಂದೆ ಮದುವೆಯಾಗಿದ್ದ ಅರವಿಂದ್-ಚೈತನ್ಯ ನಡುವೆ ಮನಸ್ತ ಉಂಟಾಗಿ ಅರವಿಂದ್ ವಿಚ್ಛೆದನಕ್ಕೆ ಮುಂದಾಗಿದ್ದ. ಆದರೆ ಮಹಿಳೆ ವಿಚ್ಛಧನ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ 2023 ರ ಜನವರಿ 1 ರಂದು ಚೈತನ್ಯಳನ್ನು ಹತ್ಯೆಗೆ ಯತ್ನ ನಡೆಸಲಾಗಿದೆ.

ಚೈತನ್ಯ ಭರತನಾಟ್ಯ ಕ್ಲಾಸ್ ಮುಗಿಸಿ ವಾಪಸ್ ಬರುತ್ತಿದ್ದ ವೇಳೆ ಕಾರಿನಿಂದ ಡಿಕ್ಕಿಹೊಡೆದ ಅರವಿಂದ್ ಸ್ನೇಹಿತ ಉದಯ್ ಎಂಬಾತ ಹತ್ಯೆಗೆ ಯತ್ನಿಸಿದ್ದ. ಆದರೆ ಅದೃಷ್ಟವಶಾತ್ ಅಪಘಾತದಲ್ಲಿ ಚೈತನ್ಯ ಪಾರಾಗಿದ್ದರು. ದೇವನಹಳ್ಳಿ ಪೊಲೀಸರು ಅಪಘಾತ ಪ್ರಕರಣ ದಾಖಲಿಸಿಕೊಂಡಿದ್ದರು. ಅನುಮಾನ ಬಂದ ಬಳಿಕ ಬಾಗಲೂರು ಪೊಲೀಸ್ ಠಾಣೆಗೆ ಪ್ರಕರಣವನ್ನು ವರ್ಗಾವಣೆ ಮಾಡಲಾಗಿದ್ದು, ತನಿಖೆ ವೇಳೆ ಉದಯ್ ಸತ್ಯ ಬಾಯಿಬಿಟ್ಟಿದ್ದಾನೆ. ಸದ್ಯ ಆರೋಪಿ ಉದಯ್ ಹಾಗೂ ಅರವಿಂದ್ ನನ್ನು ಪೊಲೀಸರು ಬಂಧಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read