ಇದೇ ಮೊದಲ ಬಾರಿಗೆ ‘ಬಿಗ್ ಬಾಸ್’ ಶೋ ಆರಂಭಕ್ಕೂ ಮೊದಲೇ ಸ್ಪರ್ಧಿಗಳ ಹೆಸರು ಬಹಿರಂಗ

ಸೆ. 29ರಂದು ಸಂಜೆ 6 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ‘ಬಿಗ್ ಬಾಸ್’ 11ನೇ ಆವೃತ್ತಿ ಶುರುವಾಗಲಿದೆ. ಇದೇ ಮೊದಲ ಬಾರಿಗೆ ‘ಬಿಗ್ ಬಾಸ್’ ಶೋ ಆರಂಭಕ್ಕೂ ಮೊದಲೇ ಸ್ಪರ್ಧಿಗಳ ಹೆಸರನ್ನು ಘೋಷಣೆ ಮಾಡಲಾಗುವುದು.

ಸೆ. 28ರಂದು ಸಂಜೆ ಆರಂಭವಾಗುವ ‘ರಾಜ ರಾಣಿ’ ಗ್ರಾಂಡ್ ಫಿನಾಲೆಯಲ್ಲಿ ‘ಬಿಗ್ ಬಾಸ್’ನಲ್ಲಿ ಭಾಗವಹಿಸುವ ಕೆಲವು ಸ್ಪರ್ಧಿಗಳ ಹೆಸರು ಘೋಷಣೆ ಆಗಲಿದೆ. ಇವರನ್ನು ಮತದಾನದ ಮೂಲಕ ‘ಬಿಗ್ ಬಾಸ್’ ಮನೆಯೊಳಗೆ ಕಳುಹಿಸಲಾಗುತ್ತದೆ ಎಂದು ವಾಹಿನಿಯ ಬ್ಯುಸಿನೆಸ್ ಹೆಡ್ ಪ್ರಶಾಂತ್ ನಾಯಕ್ ತಿಳಿಸಿದ್ದಾರೆ.

‘ಬಿಗ್ ಬಾಸ್’ ಸೀಸನ್ 11ರ ಬಗ್ಗೆ ಮಾತನಾಡಿದ ನಟ ಸುದೀಪ್, ಕಳೆದ 10 ಆವೃತ್ತಿಗಳಲ್ಲಿ ‘ಬಿಗ್ ಬಾಸ್’ ನಿರ್ವಹಿಸಿದ್ದು, ಬ್ರೇಕ್ ಪಡೆದುಕೊಳ್ಳಲು ಯೋಚಿಸಿದ್ದೆ. ಬೇರೆಯವರನ್ನು ಆ ಸ್ಥಾನಕ್ಕೆ ನೋಡಿ ಎಂದು ಹೇಳಿದ್ದೆ. ಆದರೆ, ಹಣದ ವಿಚಾರಕ್ಕಾಗಿ ನಾನು ಈ ನಿರ್ಧಾರ ಕೈಗೊಂಡಿರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಸ್ವರ್ಗ -ನರಕ ಪರಿಕಲ್ಪನೆ ಕುರಿತು ಮಾತನಾಡಿದ ಸುದೀಪ್, ಈ ಪರಿಕಲ್ಪನೆ ಸುಲಭವಿಲ್ಲ, ಈ ಹಿಂದೆ ಶೋ ಶುರುವಾದ ವಾರದ ನಂತರ ಸ್ವರ್ಗ ನರಕದ ಗುಂಪು ರಚನೆಯಾಗುತ್ತಿತ್ತು. ಈಗ ಮೊದಲೇ ರಚನೆಯಾಗುತ್ತಿದೆ. ‘ಬಿಗ್ ಬಾಸ್’ ಮನೆಯ ವಿನ್ಯಾಸ ಕೂಡ ಸ್ವರ್ಗ ನರಕದಂತಿದೆ ಎಂದು ತಿಳಿಸಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read