ಬೆಂಗಳೂರು : ಕನ್ನಡದ ಬಹು ನಿರೀಕ್ಷಿತ ರಿಯಾಲಿಟಿ ಶೋ ‘ಬಿಗ್ ಬಾಸ್-12’ ಪ್ರೋಮೋ ರಿಲೀಸ್ ಆಗಿದೆ.
ಸೆಪ್ಟೆಂಬರ್ 28 ರಂದು ಬಿಗ್ ಬಾಸ್-12 ಆರಂಭವಾಗಲಿದ್ದು, ಕಲರ್ಸ್ ಕನ್ನಡ ವಾಹಿನಿ ಇದೀಗ ಪ್ರೋಮೋ ರಿಲೀಸ್ ಮಾಡಿದೆ. 12 ನೇ ಸೀಸನ್ ನಲ್ಲಿ ನಟ ಸುದೀಪ್ ಅವರೇ ನಿರೂಪಣೆ ಮಾಡಲಿದ್ದು, ಹೊಸ ಲುಕ್ ನಲ್ಲಿ ಸುದೀಪ್ ಮಿಂಚಿದ್ದಾರೆ .
ರಿಯಾಲಿಟಿ ಶೋಗಳ ಬಾಸ್, ರಿಯಲ್ ಎಂಟರ್ಟೈನ್ಮೆಂಟ್ಗೆ ಒಂದೇ ಅಡ್ರೆಸ್ | ಬಿಗ್ ಬಾಸ್ ಕನ್ನಡ ಸೀಸನ್ 12 ಬಿಗ್ ಬಾಸ್ GRAND OPENING | ಸೆಪ್ಟೆಂಬರ್ 28 ಎಂದು ಕಲರ್ಸ್ ಕನ್ನಡ ವಾಹಿನಿ ಪ್ರೋಮೋ ಹಂಚಿಕೊಂಡಿದೆ.
ಪ್ರೋಮೋದಲ್ಲಿ ‘’ ನನ್ನ ಪ್ರೀತಿಯ ಸಮಸ್ತ ಕನ್ನಡಿಗರ ಕುಟುಂಬಕ್ಕೆ ಸ್ವಾಗತ’’ ಎಂದು ಕಂಚಿನ ಕಂಠದಲ್ಲಿ ಸುದೀಪ್ ಹೇಳುತ್ತಾರೆ. ಹೊಸ ಸೆಟ್ ರೆಡಿ. ಹೊಸ ಕಂಟಸ್ಟೆಂಡ್ ರೆಡಿ, 7 ಕೋಟಿ ಕನ್ನಡಿಗರೂ ರೆಡಿ..ನೀವು.. ಎಂಬ ವಾಯ್ಸ್ ಬರುತ್ತಿದ್ದಂತೆ..ರೆಡಿ ಅಂತ ಸುದೀಪ್ ಕೂಡ ಹೇಳುತ್ತಾರೆ. ಸ್ಪರ್ಧಿಗಳ ಆಯ್ಕೆ ಬಗ್ಗೆ ರಿವೀಲ್ ಆಗಿಲ್ಲ, ಎಲ್ಲವನ್ನೂ ಗುಟ್ಟಾಗಿ ಇಡಲಾಗಿದೆ. ಒಟ್ಟಿನಲ್ಲಿ ಸೆ.28 ರಂದು ಬಿಗ್ ಬಾಸ್ ಗ್ರ್ಯಾಂಡ್ ಓಪನಿಂಗ್ ಆಗಲಿದೆ. ಸೆ.29 ರಿಂದ ಶೋ ಆರಂಭವಾಗಲಿದೆ.
ರಿಯಾಲಿಟಿ ಶೋಗಳ ಬಾಸ್, ರಿಯಲ್ ಎಂಟರ್ಟೈನ್ಮೆಂಟ್ಗೆ ಒಂದೇ ಅಡ್ರೆಸ್ | ಬಿಗ್ ಬಾಸ್ ಕನ್ನಡ ಸೀಸನ್ 12
— Colors Kannada (@ColorsKannada) September 2, 2025
ಬಿಗ್ ಬಾಸ್ GRAND OPENING | ಸೆಪ್ಟೆಂಬರ್ 28#BiggBossKannada12 #BBK12 #ColorsKannada #AdeBeruHosaChiguru #ಕಲರ್ಫುಲ್ಕತೆ #colorfulstory #KicchaSudeep #CKPromo pic.twitter.com/za8qOPw7jp