ಕಾರವಾರ : ಏರ್ ಗನ್ ನಿಂದ ಮಿಸ್ ಫೈರ್ ಆಗಿ 9 ವರ್ಷದ ಬಾಲಕ ಸಾವನ್ನಪ್ಪಿದ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಘಟನೆ ನಡೆದ ಬಳಿಕ ಶಿರಸಿ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ನಡೆಸಿದ್ದು, ತನಿಖೆಯಲ್ಲಿ ಸತ್ಯ ಬಯಲಾಗಿದೆ.
ಹೌದು. ಮೃತ ಬಾಲಕ ಕರಿಯಪ್ಪನ ಸಹೋದರನ ಕೈಯಿಂದ ಮಿಸ್ ಫೈರಿಂಗ್ ಆಗಿಲ್ಲ ಎನ್ನುವುದು ತನಿಖೆಯಲ್ಲಿ ದೃಢಪಟ್ಟಿದೆ. ಬಾಲಕನ ಮನೆಯ ಕೆಲಸಗಾರ ನಿತೀಶ್ ಗೌಡ ಕೈಯಿಂದ ಮಿಸ್ ಫೈರ್ ಆಗಿ ಬಾಲಕ ಸಾವನ್ನಪ್ಪಿದ್ದಾನೆ ಎಂಬುದು ಶಿರಸಿ ಗ್ರಾಮಾಂತರ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ದೃಢವಾಗಿದೆ. ಮೊದಲು ತಮ್ಮನ ಕೈಯಲ್ಲಿದ್ದ ಗನ್ ಮಿಸ್ ಫೈರ್ ಆಗಿ ಗುಂಡು ತಗುಲಿತ್ತು ಎನ್ನಲಾಗಿತ್ತು. ಪೊಲೀಸರು ಸಿಸಿಟಿವಿ ವಿಡಿಯೋಗಳನ್ನು ಪರಿಶೀಲಿಸಿದಾಗ ಅಸಲಿ ಸತ್ಯ ಹೊರಗೆ ಬಿದ್ದಿದೆ.
ಮಕ್ಕಳಿಬ್ಬರು ಆಟವಾಡುತ್ತಾ ಏರ್ ಗನ್ ಹಿಡಿದುಕೊಂಡಿದ್ದ ನಿತೀಶ್ ಬಳಿಗೆ ಬಂದಿದ್ದಾರೆ. ವಿಶೇಷ ಚೇತನ ನಿತಿಶ್ ಗೌಡನಿಗೆ ಎಡಗೈ ಊನವಾಗಿತ್ತು. ಮಕ್ಕಳು ಬಂದ ಹಿನ್ನೆಲೆಯಲ್ಲಿ ಏರ್ ಗನ್ ಸರಿಸುವಾಗ ಎಡಗೈ ತಾಗಿತ್ತು. ಪರಿಣಾಮ ಗುಂಡು ನೇರವಾಗಿ ಬಾಲಕ ಕರಿಯಪ್ಪನ ಎದೆ ಸೀಳಿತು. ಪರಿಣಾಮ ಸ್ಥಳದಲ್ಲೇ ಬಾಲಕ ಕರಿಯಪ್ಪ(9) ಮೃತಪಟ್ಟಿದ್ದ. ಗನ್ ಬಳಸುವ ಮಾಹಿತಿಯೇ ಇಲ್ಲದ ಕೆಲಸಗಾರ ನಿತೀಶ್ ಗೌಡ ಹಾಗೂ ಮನೆ ಮಾಲೀಕ ರಾಘವೇಂದ್ರ ಹೆಗಡೆ ವಿರುದ್ಧ ಪ್ರಕರಣ ದಾಖಲಾಗಿದೆ. ಮಂಗ ಓಡಿಸಲು ಬಳಸುವ ಏರ್ ಗನ್ ನಿಂದ ಗುಂಡು ಸಿಡಿದು ಅವಘಡ ಸಂಭವಿಸಿತ್ತು.ಈ ಸಂಬಂಧ ಶಿರಸಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.ಘಟನೆ ಸಂಬಂಧ ಕೆಲಸಗಾರ ನಿತೀಶ್ ಗೌಡ ಹಾಗೂ ಮನೆ ಮಾಲೀಕ ರಾಘವೇಂದ್ರ ಹೆಗಡೆಯನ್ನು ಪೊಲೀಸರು ಬಂಧಿಸಿದ್ದಾರೆ.