ಧರ್ಮಸ್ಥಳ : ‘ಧರ್ಮಸ್ಥಳ ಕೇಸ್’ ಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ದೂರುದಾರ ಪಾಯಿಂಟ್ 11 ರ ಬದಲು ಬೇರೆ ಜಾಗಕ್ಕೆ ಕರೆದೊಯ್ದಿದ್ದಾನೆ.
ಹೌದು, ದೂರುದಾರ ಪಾಯಿಂಟ್ 11 ರ ಜಾಗಕ್ಕೆ ಕರೆದುಕೊಂಡು ಹೋಗುವ ಬದಲು ಗುಡ್ಡದ ಮೇಲ್ ಭಾಗಕ್ಕೆ ಕರೆದುಕೊಂಡು ಹೋಗಿದ್ದು, ಅಲ್ಲಿ ಏನಾದರೂ ಸಿಗಬಹುದೆಂಬ ಕುತೂಹಲವಿದೆ .ಗುರುತಿಸಿದ ಸ್ಥಳ ಬಿಟ್ಟು ದೂರುದಾರ ಬೇರೆ ಜಾಗಕ್ಕೆ ಕರೆದುಕೊಂಡು ಹೋಗಿದ್ದಾನೆ. ಆತನ ಜೊತೆ ಎಸ್, ಐಟಿ , ಸಿಬ್ಬಂದಿಗಳು, ಕಾರ್ಮಿಕರು ಗುಡ್ಡ ಹತ್ತಿದ್ದಾರೆ.
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ಶೋಧ ಕಾರ್ಯ ಚುರುಕುಗೊಳಿಸಿದೆ. ಈ ನಡುವೆ ಶವಗಳನ್ನು ಹೂಟಿಟ್ಟಿದ್ದಾಗಿ ದೂರುದಾರ ಹೇಳಿರುವ ಜಾಗದ ಬಳಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.
ದೂರುದಾರ ಒಟ್ಟು 13 ಸ್ಥಳಗಳಲ್ಲಿ ಶವಗಳನ್ನು ಹೂತುಹಾಕಿರುವುದಾಗಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದು, ಈಗಾಗಲೇ ಎಸ್ ಐಟಿ ತಂಡ 10 ಸ್ಥಳಗಳಲ್ಲಿ ಅಸ್ಥಿಪಂಜರಗಳಿಗಾಗಿ ಶೋಧ ಕಾರ್ಯ ನಡೆಸಿದೆ. ಮೂರು ಸ್ಥಳಗಳಲ್ಲಿ ಇಂದು ಸೋಮವಾರ ಶೋಧಕಾರ್ಯ ನಡೆಯಲಿದೆ.ಈ ನಡುವೆ ಎಸ್ ಐಟಿ ತಂಡ 13 ಪಾಯಿಂಟ್ ಗಳಲ್ಲಿಯೂ ಭದ್ರತೆಗಾಗಿ ಪೊಲೀಸರನ್ನು ನೇಮಕ ಮಾಡಿದೆ. ಆಯಾ ಸ್ಥಳಗಳಲ್ಲಿ ಇಬ್ಬರು ಗನ್ ಮ್ಯಾನ್ ಗಳನ್ನು ನಿಯೋಜನೆ ಮಾಡಿದೆ.