BIG UPDATE : ತಾಯಿಯನ್ನೇ ಕೊಂದ ಕೇಸ್ ಗೆ ಬಿಗ್ ಟ್ವಿಸ್ಟ್ : ಪೊಲೀಸ್ ವಿಚಾರಣೆ ವೇಳೆ ‘ಕರಾಳ ಕಥೆ’ ಬಿಚ್ಚಿಟ್ಟ ಹಂತಕಿ

ಬೆಂಗಳೂರು: ತಾಯಿಯನ್ನು ಕೊಲೆ ಮಾಡಿ ಸೂಟ್ ಕೇಸ್ ನಲ್ಲಿ ಶವವನ್ನು ಠಾಣೆಗೆ ತಂದ ಘಟನೆಗೆ ಸಂಬಂಧಿಸಿದಂತೆ ಪುತ್ರಿ ಸೊನಾಲಿ ಪೊಲೀಸ್ ವಿಚಾರಣೆ ವೇಳೆ ಶಾಕಿಂಗ್ ಮಾಹಿತಿ ಬಿಚ್ಚಿಟ್ಟಿದ್ದಾಳೆ.

ತಾಯಿಗೆ ಮುಕ್ತಿ ಕೊಡಲು ನಾನು ತಾಯಿಯನ್ನು ಕೊಲೆ ಮಾಡಿದೆ. ನಿದ್ದೆ ಮಾತ್ರ ಕೊಟ್ಟು ಕೊಲೆ ಮಾಡಲು ತಾಯಿಯೇ ನನ್ನ ಬಳಿ ಹೇಳಿದ್ದರು ಎಂದು ಸೊನಾಲಿ ಪೊಲೀಸ್ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾಳೆ. ಹತ್ಯೆಗೂ ಮುನ್ನ ತಾಯಿಯ ಮಗಳು ಅರ್ಧ ಗಂಟೆ ಕಳೆದಿದ್ದರು. ತಾಯಿ ಬೀವಾ ಪಾಲ್ ನಿದ್ರೆ ಮಾತ್ರ ಕೊಟ್ಟು ಸಾಯಿಸುವಂತೆ ಹೇಳಿದ್ದರು ಎಂದು ಸೊನಾಲಿ ಹೇಳಿಕೆ ನೀಡಿದ್ದಾರೆ. ನೀನು ನನ್ನ ತಂದೆ ಬಳಿ ಹೋಗು ನಾನು ಜೈಲಿಗೆ ಹೋಗುವೆ ಎಂದು ಸೊನಾಲಿ ತನ್ನ ತಾಯಿ ಬಳಿ ಹೇಳಿದ್ದಳು ಎನ್ನಲಾಗಿದೆ. ಸೊನಾಲಿಯ ಅತ್ತೆ ಹಾಗೂ ತಾಯಿ ನಡುವೆ ಜಗಳ ನಡೆಯುತ್ತಿದ್ದು, ಇದರಿಂದ ಬೇಸತ್ತ ಮಗಳು ಈ ಕೃತ್ಯ ಎಸಗಿದ್ದಾಳೆ. ತಾಯಿಗೆ 20 ನಿದ್ದೆ ಮಾತ್ರ ಹಾಕಿದ ಸೊನಾಲಿ ನಂತರ ವೇಲು ಬಿಗಿದು ತಾಯಿಯನ್ನು ಹತ್ಯೆ ಮಾಡಿದ್ದಾಳೆ. ನಂತರ ಯಾರಿಗೂ ಗೊತ್ತಾಗದೇ ತಾಯಿಯ ಶವವನ್ನು ಸೂಟ್ ಕೇಸ್ ನಲ್ಲಿ ತೆಗೆದುಕೊಂಡು ಪೊಲೀಸ್ ಠಾಣೆಗೆ ಬಂದಿದ್ದಾಳೆ.

ಬಿಳೇಕಹಳ್ಳಿಯ ಎಂಎಸ್ಆರ್ ಅಪಾರ್ಟ್ಮೆಂಟ್ ನಲ್ಲಿ ಕೃತ್ಯ ನಡೆದಿದೆ. ಪುತ್ರಿ ಸೋನಾಲಿ ಸೇನ್(39) ಕೊಲೆ ಆರೋಪಿ. ತಾಯಿ ಬೀವಾಪಾಲ್(78) ಅವರನ್ನು ಸೋನಾಲಿ ಕೊಲೆ ಮಾಡಿದ್ದಾಳೆ.ತಾಯಿ, ಅತ್ತೆಯೊಂದಿಗೆ ಫ್ಲ್ಯಾಟ್ ನಲ್ಲಿ ಒಟ್ಟಿಗೆ ವಾಸವಾಗಿದ್ದ ಸೋನಾಲಿ ಇವರಿಬ್ಬರ ಜಗಳದಿಂದ ಬೇಸತ್ತಿದ್ದಳು. ಜಗಳದಿಂದಾಗಿ ನಿದ್ದೆ ಮಾತ್ರೆ ನುಂಗಿ ಸಾಯುವುದಾಗಿ ತಾಯಿ ಹೇಳಿದ್ದು, ಮುಂಜಾನೆ ತಾಯಿಗೆ ಸೋನಾಲಿ 20 ನಿದ್ದೆ ಮಾತ್ರೆ ನುಂಗಿಸಿದ್ದಾಳೆ. ಸೂಟ್ಕೇಸ್ ನಲ್ಲಿ ಶವ ಮತ್ತು ತಂದೆಯ ಫೋಟೋ ಇಟ್ಟುಕೊಂಡು ಠಾಣೆಗೆ ಬಂದಿದ್ದಾಳೆ. ಪೊಲೀಸರು ಹಂತಕಿ ಕೃತ್ಯ ಕಂಡು ಬೆಚ್ಚಿಬಿಚ್ಚಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read