ಸ್ಪೈಸ್’ಜೆಟ್ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಮತ್ತೊಂದು ವಿಡಿಯೋ ವೈರಲ್ ಆಗಿದೆ.ಶ್ರೀನಗರದಿಂದ ದೆಹಲಿಗೆ ಹೋಗುವ SG-359 ವಿಮಾನದ ಬೋರ್ಡಿಂಗ್ ಗೇಟ್ನಲ್ಲಿ ಹಿರಿಯ ಸೇನಾ ಅಧಿಕಾರಿಯೊಬ್ಬರು ನಾಲ್ವರು ಸ್ಪೈಸ್ಜೆಟ್ ಉದ್ಯೋಗಿಗಳ ಮೇಲೆ ಭೀಕರವಾಗಿ ಹಲ್ಲೆ ನಡೆಸುತ್ತಿರುವ ವಿಡಿಯೋ ವೈರಲ್ ಆದ ಒಂದು ದಿನದ ನಂತರ, ಘಟನೆಯ ಮತ್ತೊಂದು ವಿಡಿಯೋ ಆನ್ಲೈನ್ನಲ್ಲಿ ಕಾಣಿಸಿಕೊಂಡಿದೆ.
ಎರಡನೇ ವೀಡಿಯೊದಲ್ಲಿ, ವಿಮಾನಯಾನ ಸಿಬ್ಬಂದಿ ಮೊದಲು ಲೆಫ್ಟಿನೆಂಟ್ ಕರ್ನಲ್ ಅವರನ್ನು ಹೊಡೆದಿದ್ದಾರೆಂದು ಹೇಳಲಾಗಿದ್ದು, ನಂತರ ಸೇನಾ ಅಧಿಕಾರಿ ಪ್ರತಿದಾಳಿ ನಡೆಸಿದ್ದಾರೆ. ಎರಡನೇ ವೀಡಿಯೊದ ಸತ್ಯಾಸತ್ಯತೆಯನ್ನು ಬಗ್ಗೆ ತಿಳಿದು ಬಂದಿಲ್ಲ. ಘಟನೆಯ 2 ನೇ ವೀಡಿಯೋ ಸದ್ಯ ವೈರಲ್ ಆಗಿದೆ.
ಆ ಅಧಿಕಾರಿಯನ್ನು ಲೆಫ್ಟಿನೆಂಟ್ ಕರ್ನಲ್ ಆರ್ ಕೆ ಸಿಂಗ್ ಎಂದು ಗುರುತಿಸಲಾಗಿದೆ. ಇತ್ತೀಚಿನ ವೀಡಿಯೊದಲ್ಲಿ ವಿಮಾನಯಾನ ನೌಕರರು ಆಕ್ರಮಣಕಾರಿಯಾಗಿ ವರ್ತಿಸುತ್ತಿರುವುದನ್ನು ಮತ್ತು ಮೊದಲು ಲೆಫ್ಟಿನೆಂಟ್ ಕರ್ನಲ್ ಅವರನ್ನು ಹೊಡೆಯುತ್ತಿರುವುದನ್ನು ತೋರಿಸುತ್ತದೆ. ವಿಡಿಯೋದಲ್ಲಿ, ಸೇನಾ ಅಧಿಕಾರಿಯನ್ನು ನೆಲಕ್ಕೆ ತಳ್ಳಿ, ನಂತರ ಅವರು ಪ್ರತಿದಾಳಿ ನಡೆಸಿ ವಿಮಾನಯಾನ ಸಂಸ್ಥೆಯ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿರುವುದನ್ನು ಕಾಣಬಹುದು. ಇಡೀ ಘಟನೆಯ ಪ್ರತ್ಯಕ್ಷದರ್ಶಿ ಎಂದು ಹೇಳಿಕೊಳ್ಳುವ X ಬಳಕೆದಾರರು, ಸೇನಾ ಅಧಿಕಾರಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಕ್ಕಾಗಿ ವಿಮಾನಯಾನ ಸಂಸ್ಥೆಯ ಸಿಬ್ಬಂದಿಯನ್ನು ದೂಷಿಸಿದರು, ಇದು ಘಟನೆಗೆ ಕಾರಣವಾಯಿತು ಎನ್ನಲಾಗಿದೆ.
Watch closely between 20–30 secs — it’s a @flyspicejet staffer who first raises his hand on the Army officer.
— दृष्टिकोण 🇮🇳 (@Drishti_K47) August 4, 2025
The officer was outnumbered and assaulted by 2–3 SpiceJet employees first.
Let the facts speak before the judgments fly. pic.twitter.com/T9yfEVPO0Y
I hope all retired Army officers will agitate & demand for strong action against this Army officer just the way they do if any of their officer is beaten up by anyone
— Deepika Narayan Bhardwaj (@DeepikaBhardwaj) August 3, 2025
This is horrendous behaviour @adgpipic.twitter.com/KAjKXUXNf5