BIGG UPDATE : ಬೆಂಗಳೂರು ಜೋಡಿ ಕೊಲೆಗೆ ಬಿಗ್ ಟ್ವಿಸ್ಟ್ : ಗಂಡನ ಸಾಲ ತೀರಿಸಲು ಅತ್ತೆ-ಮಾವನನ್ನೇ ಕೊಂದ ಸೊಸೆ

ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೂಲಿಬೆಲೆ ಗ್ರಾಮದಲ್ಲಿ ರಾಡ್ ನಿಂದ ಹೊಡೆದು ಕೊಲೆ ಮಾಡಿರುವ ಭೀಕರ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ.

ಮಗನೇ ತಂದೆ ತಾಯಿಯನ್ನು ಹತ್ಯೆ ಮಾಡಿದ್ದಾನೆ ಎಂದು ಮೃತ ದಂಪತಿಯ ಮಕ್ಕಳು ಆರೋಪಿಸಿದ್ದರು. ಆದರೆ ದಂಪತಿಯ ಪುತ್ರ ನರಸಿಂಹಮೂರ್ತಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಅಸಲಿ ವಿಚಾರ ಬೆಳಕಿಗೆ ಬಂದಿದೆ.
ವೃದ್ಧ ದಂಪತಿಯನ್ನು ಕೊಲೆ ಮಾಡಿದ್ದು ನರಸಿಂಹಮೂರ್ತಿ ಅಲ್ಲ ಬದಲಾಗಿ ಆತನ ಪತ್ನಿ ಭಾಗ್ಯಮ್ಮ, ಮಗಳು ವರ್ಷಾ ಹಾಗೂ ಅಪ್ರಾಪ್ತ ಮಗ ಎಂಬುದು ತಿಳಿದು ಬಂದಿದೆ. ನರಸಿಂಹಮೂರ್ತಿ ಟೂರರ್ಸ್ ಆ್ಯಂಡ್ ಟ್ರಾವೇಲ್ಸ್ ಸೇರಿ ಹಲವು ಕೆಲಸ ಮಾಡಲು ಹೋಗಿ ಕೋಟ್ಯಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದರು. ಸಾಲಗಾರರು ಕೂಡ ಮನೆ ಬಳಿ ಬಂದು ಹಣ ನೀಡುವಂತೆ ಕಿರುಕುಳ ನೀಡುತ್ತಿದ್ದರು. ನರಸಿಂಹ ಮೂರ್ತಿ ಇದನ್ನು ತನ್ನ ಪತ್ನಿ ಬಳಿ ಹೇಳಿಕೊಂಡು ಚಿಂತಿಸಿದ್ದನು. ಆದ್ದರಿಂದ ಪತ್ನಿ ಅತ್ತೆ ಮಾವನ ಜಮೀನು ಕೇಳಿ, ಅದನ್ನು ಮಾರಿ ಸಾಲ ಪಡೆಯೋಣ ಎಂದು ಸಲಹೆ ನೀಡಿದ್ದಳು. ಅದೇ ರೀತಿ ನರಸಿಂಹಮೂರ್ತಿ ತಂದೆ-ತಾಯಿ ಬಳಿ ತನ್ನ ಭಾಗದ ಜಮೀನು ನೀಡುವಂತೆ ಕೇಳಿದ್ದಾನೆ. ಅದಕ್ಕೆ ವೃದ್ಧ ದಂಪತಿ ಜಮೀನನನ್ನು ಆರು ಭಾಗ ಮಾಡಿ ಹೆಣ್ಣು ಮಕ್ಕಳು ಮತ್ತು ಮಗನಿಗೆ ನೀಡುವುದಾಗಿ ಹೇಳಿದ್ದಾರೆ.

ಇದರಿಂದ ಸಿಟ್ಟಾದ ನರಸಿಂಹಮೂರ್ತಿ ಪತ್ನಿ ಹಾಗೂ ಮಕ್ಕಳು ವೃದ್ದ ದಂಪತಿಗಳಿಗೆ ರಾಡ್ ನಿಂದ ಹೊಡೆದು ಬರ್ಬರವಾಗಿ ಕೊಂದಿದ್ದಾರೆ. ಅತ್ತೆ ಮಾವನನ್ನು ಕೊಂದರೆ ಆಸ್ತಿ ನಮಗೆ ಸಿಗುತ್ತದೆ ಎಂದು ಭಾವಿಸಿದ ಸೊಸೆ ಕೊಲೆ ಮಾಡಿ ಜೈಲು ಪಾಲಾಗಿದ್ದಾಳೆ. ಕೊಲೆ ಪ್ರಕರಣ ಬಯಲಾಗುತ್ತಿದ್ದಂತೆ ಹೆಂಡ್ತಿ-ಮಕ್ಕಳನ್ನು ಕಾಪಾಡಿಕೊಳ್ಳಲು ನರಸಿಂಹಮೂರ್ತಿ ದೊಡ್ಡ ನಾಟಕವನ್ನೇ ಮಾಡಿದ್ದನು, ಆದರೆ ಸತ್ಯ ಯಾವತ್ತಾದರೂ ಬಯಲಾಗುತ್ತದೆ ಎಂಬುದು ಆತನಿಗೆ ಗೊತ್ತಿರಲಿಲ್ಲವೇನು..? ವಿಷಯ ತಿಳಿಯುತ್ತಿದ್ದಂತೆ ಪತಿ ನರಸಿಂಹಮೂರ್ತಿ ಪತ್ನಿ ಭಾಗ್ಯಮ್ಮ, ಮಗಳು ವರ್ಷ, ಅಪ್ರಾಪ್ತ ಮಗ, ಎಲ್ಲರೂ ಜೈಲು ಸೇರಿದಿದ್ದಾರೆ.

ಮೃತರನ್ನು ರಾಮಕೃಷ್ಣಪ್ಪ (70) ಮತ್ತು ಅವರ ಪತ್ನಿ ಮುನಿರಾಮಕ್ಕ (65) ಎಂದು ಗುರುತಿಸಲಾಗಿದೆ. ಈ ಆಸ್ತಿಯನ್ನು ತಮ್ಮ ಹೆಣ್ಣುಮಕ್ಕಳಿಗೂ ಹಂಚಲು ನಿರ್ಧರಿಸಿದ ನಂತರ ದಂಪತಿಯನ್ನು ಕೊಲೆ ಮಾಡಲಾಗಿದೆ.
ವಾಲ್ಮೀಕಿ ನಗರದ ಮನೆಯೊಂದರಲ್ಲಿ ವೃದ್ಧ ದಂಪತಿಯ ಕೊಲೆ ನಡೆದಿದೆ. ಅವರ ಮಗ ಕಳೆದ 18 ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಅವರಿಗೆ ನಾಲ್ವರು ಹೆಣ್ಣು ಮಕ್ಕಳಿದ್ದು, ಅವರಲ್ಲಿ ಒಬ್ಬರು ದೂರು ದಾಖಲಿಸಿದ್ದರು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read