ನವದೆಹಲಿ: ಮದುವೆ ಸೀಸನ್ ಆರಂಭವಾಗುತ್ತಿರುವುದರಿಂದ ಸ್ಥಳೀಯ ವ್ಯಾಪಾರಿಗಳು ಚಿನ್ನದ ಖರೀದಿ ಹೆಚ್ಚಿಸಿದ್ದಾರೆ. ಇದರ ಪರಿಣಾಮ ಚಿನಿವಾರಪೇಟೆಯಲ್ಲಿ ಮಂಗಳವಾರ ಚಿನ್ನ ಮತ್ತು ಬೆಳ್ಳಿ ದರ ಭಾರಿ ಜಿಗಿತ ಕಂಡಿದೆ.
ದೆಹಲಿಯಲ್ಲಿ 10 ಗ್ರಾಂ ಅಪರಂಜಿ ಚಿನ್ನದ ದರ 3500 ರೂ. ಏರಿಕೆಯಾಗಿದ್ದು, 1,28,900 ರೂ.ಗೆ ತಲುಪಿದೆ. ಆಭರಣ ಚಿನ್ನದ ದರ 3500 ರೂ. ಹೆಚ್ಚಳವಾಗಿ 1,28,300 ರೂ.ಗೆ ತಲುಪಿದೆ. ಬೆಳ್ಳಿ ದರ ಕೆಜಿಗೆ 5800 ರೂ. ಏರಿಕೆಯಾಗಿದ್ದು, 1,60,800 ರೂ.ಗೆ ಮಾರಾಟವಾಗಿದೆ.
ಡಾಲರ್ ಮೌಲ್ಯ ಇಳಿಕೆಯಾಗುತ್ತಿರುವುದರಿಂದ ಹೂಡಿಕೆದಾರರು ಚಿನ್ನ, ಬೆಳ್ಳಿ ಮೇಲೆ ಗಮನ ಹರಿಸುತ್ತಿರುವುದು ಬೆಲೆ ಏರಿಕೆಗೆ ಮತ್ತೊಂದು ಕಾರಣವಾಗಿದೆ. ಇನ್ನು ಬೆಂಗಳೂರಿನಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 1910 ರೂ. ಏರಿಕೆಯಾಗಿ 1,27,040 ರೂ.ಗೆ ಮಾರಾಟವಾಗಿದೆ. 22 ಕ್ಯಾರೆಟ್ ಚಿನ್ನದ ದರ 1750 ರೂ. ಏರಿಕೆಯಾಗಿ 1,16,450ರೂ. ಗೆ ತಲುಪಿದೆ. ಬೆಳ್ಳಿ ದರ ಕೆಜಿಗೆ 4000 ರೂ. ಏರಿಕೆಯಾಗಿದ್ದು 1,67,000 ರೂ.ಗೆ ಮಾರಾಟವಾಗಿದೆ.
