ಬೆಂಗಳೂರು : ಬೆಂಗಳೂರಲ್ಲಿ ಜಾತಿ ಗಣತಿ ಸಮೀಕ್ಷೆಗೆ ಗೈರಾದ ಸಿಬ್ಬಂದಿಗಳಿಗೆ ಬಿಗ್ ಶಾಕ್ ಎದುರಾಗಿದ್ದು, ಸಿಬ್ಬಂದಿಯ ವೇತನ ಕಡಿತಗೊಳಿಸಿ ಅಮಾನತು ಶಿಕ್ಷೆ ನೀಡುವುದಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ ರಾವ್ ಎಚ್ಚರಿಕೆ ನೀಡಿದ್ದಾರೆ.
ನಗರದ ಅ.4 ರಿಂದ ಸಮೀಕ್ಷೆ ಆರಂಭವಾಗಿದ್ದು, ಸಮೀಕ್ಷೆ ಕಾರ್ಯದಲ್ಲಿ ಭಾಗವಹಿಸುವುದಕ್ಕಾಗಿ ಸುಮಾರು 21 ಸಾವಿರ ಮಂದಿ ಶಿಕ್ಷಕರಿಗೆ ಪ್ರಮಾಣ ಪತ್ರ ನೀಡಲಾಗಿತ್ತು. ಈ ಪೈಕಿ ಸುಮಾರು 18 ಸಾವಿರ ಮಂದಿ ಗೈರಾಗಿದ್ದಾರೆ. ಆದರೆ ಯಾವುದೇ ಸೂಚನೆ ಇಲ್ಲದೇ ಸುಮಾರು 2300 ಸಿಬ್ಬಂದಿ ಯಾವುದೇ ಸೂಚನೆ ನೀಡದೇ ಸಮೀಕ್ಷೆಗೆ ಗೈರಾಗಿದ್ದಾರೆ. ಗೈರಾದವರಿಗೆ ಎಸ್ ಎಂ ಎಸ್ ಕಳುಹಿಸಿ ನೋಟಿಸ್ ನೀಡಿದರೂ ಹಾಜರಾಗಿಲ್ಲ. ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಂಡು ವೇತನ ಕಡಿತ ಮಾಡಲಾಗುವುದು. ಗೈರಾಗುವುದನ್ನು ಮುಂದುವರೆಸಿದರೆ ಅಮಾನತು ಶಿಕ್ಷೆ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.