ಗೋವಾ : ಗೋವಾದಲ್ಲಿ ಇನ್ಮುಂದೆ ಕನ್ನಡಿಗರು ವಾಹನ ಖರೀದಿಸುವಂತಿಲ್ಲ . ಹೌದು, ಇಂತಹದ್ದೊಂದು ಹೊಸ ಕಾನೂನು ಜಾರಿಗೆ ತರಲು ಗೋವಾ ಸರ್ಕಾರ ನಿರ್ಧರಿಸಿದೆ.
ಹೌದು. ಕರ್ನಾಟಕ ಸೇರಿದಂತೆ ಇತರ ರಾಜ್ಯದವರು ವಾಹನ ಖರೀದಿಸಲು ಮತ್ತು ಅವುಗಳನ್ನ ನೋಂದಣಿ ಮಾಡಿಸಲು ಪರವಾನಗಿ ನೀಡದಂತೆ ನಿರ್ಬಂಧ ಹೇರುವ ಕಾನೂನು ಜಾರಿಗೆ ತರಲು ಸರ್ಕಾರ ಮುಂದಾಗಿದೆ. ಗೋವಾದಲ್ಲಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಇದು ಅವರ ಮೇಲೆ ಪರಿಣಾಮ ಬೀರಲಿದೆ. ಗೋವಾದವರಿಗೆ ಉದ್ಯೋಗ ಉಳಿಸಲು ಹಲವು ರೀತಿಯ ಪ್ರಯತ್ನ ನಡೆದಿದೆ. ಅದರಲ್ಲಿ ಇದು ಕೂಡ ಒಂದು. ಗೋವಾದಲ್ಲಿ ಹಲವು ಉದ್ಯೋಗಗಳು ಕನ್ನಡಿಗರ ಪಾಲಾಗಿದೆ. ಕ್ಯಾಬ್, ಟ್ಯಾಕ್ಸಿಯನ್ನ ಕನ್ನಡಿಗರೇ ಹೆಚ್ಚು ಓಡಿಸುತ್ತಿದ್ದಾರೆ. ಎಲ್ಲಾ ಉದ್ಯಮದಲ್ಲೂ ಕನ್ನಡಿಗರೇ ಮುಂದಿದ್ದಾರೆ. ಇದನ್ನು ತಪ್ಪಿಸಲು ಗೋವಾ ಸರ್ಕಾರ ಹೊಸ ಪ್ಲ್ಯಾನ್ ಮಾಡಿದೆ. ಗೋವಾ ಸದನದಲ್ಲಿ ಈ ವಿಚಾರದ ಬಗ್ಗೆ ಚರ್ಚೆ ನಡೆದಿದೆ.
ಗೋವಾದಲ್ಲಿ ಕನ್ನಡಿಗರ ಮೇಲಿನ ಹಲ್ಲೆ
ಗೋವಾದಲ್ಲಿ ಕನ್ನಡಿಗರ ಮೇಲಿನ ಹಲ್ಲೆ, ದೌರ್ಜನ್ಯ ಪ್ರಕರಣಗಳು ಮುಂದುವರೆದಿದೆ. ವಿಜಯಪುರ ಮೂಲದ ಲಾರಿ ಚಾಲಕನೊಬ್ಬನ್ನು ಹಿಡಿದು ಗೋವಾದಲ್ಲಿ ದುಷ್ಕರ್ಮಿಗಳು ಥಳಿಸಿರುವ ಘಟನೆ ನಡೆದಿದೆ.ಗೋವಾದ ಪ್ರೆಡ್ನೆ ಬಳಿ ರಸ್ತೆಯಲ್ಲಿ ಈ ಘಟನೆ ನಡೆದಿದೆ. ದೂರು ನೀಡಿದರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಲಾರಿ ಚಾಲಕ ನೋವು ತೋಡಿಕೊಂಡಿದಾರೆ. ವಿಜಯಪುರ ಜಿಲ್ಲೆಯ ಕಲಗೇರಿ ಗ್ರಾಮದ ನಿವಾಸಿ ಅನಿಲ್ ರಾಥೋಡ್ ಹಲ್ಲೆಗೊಳಗಾದ ವ್ಯಕ್ತಿ.
ಮಹಾರಾಷ್ಟ್ರದಿಂದ ಗೋವಾಕ್ಕೆ ಅನಿಲ್ ಕಲ್ಲು ಸಾಗಿಸುತ್ತಿದ್ದರು. ಈ ವೇಳೆ ಗೋವಾದ ಪ್ರೆಡ್ನೆ ಬಳಿ ಕಾರು, ಜೀಪ್ ಗಳಲ್ಲಿ ಬಂದ ದುಷ್ಕರ್ಮಿಗಳ ಗ್ಯಾಂಗ್ ಲಾರಿ ಅಡ್ಡಗಟ್ಟಿ ಚಾಲಕನನ್ನು ನಿಂದಿಸಿ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸುತ್ತಿರುವುದನ್ನು ಅನಿಲ್ ರಾಥೋಡ್ ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಬಳಿಕ ಪ್ರೆಡ್ನೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಆರೋಪಿಸಿದ್ದಾರೆ.