ಬೆಂಗಳೂರು : ಅಕ್ರಮ ಚಿನ್ನ ಸಾಗಾಟ ಕೇಸ್ ನಲ್ಲಿ ನಟಿ ರನ್ಯಾರಾವ್ ಗೆ ಬಿಗ್ ಶಾಕ್ ಎದುರಾಗಿದ್ದು, 102.55 ಕೋಟಿ ರೂ ದಂಡ ಪಾವತಿಸುವಂತೆ ಡಿಆರ್ ಐ (DRI) ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.
ನಟಿ ರನ್ಯಾರಾವ್ ಅಕ್ರಮವಾಗಿ 127.3 ಕೆಜಿ ಚಿನ್ನ ಸಾಗಣೆ ಮಾಡಿರುವುದು ಧೃಡವಾಗಿದೆ. ಇಂದು ಜೈಲಿಗೆ ತೆರಳಿ ನೋಟಿಸ್ ನೀಡಲಿರುವ ಅಧಿಕಾರಿಗಳು ದಂಡ ಪಾವತಿ ಮಾಡದಿದ್ರೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಿದ್ದಾರೆ. ಅದೇ ರೀತಿ ಪ್ರಕರಣದ ಎ-2 ಆರೋಪಿ ತರುಣ್ ಕೊಂಡೂರು ರಾಜುಗೆ 62 ಕೋಟಿ ರೂ ದಂಡ ವಿಧಿಸಲಾಗಿದೆ.ಅದೇ ರೀತಿ ಪ್ರಕರಣದ ಇನ್ನುಳಿದ ಆರೋಪಿಗಳಾದ ಭರತ್ ಜೈನ್, ಸಾಹಿಲ್ ಜೈನ್ ಗೂ 53 ಕೋಟಿ ರೂ. ದಂಡ ಪಾವತಿಸುವಂತೆ ನೋಟಿಸ್ ನೀಡಲಾಗಿದೆ. ದಂಡ ಪಾವತಿ ಜೊತೆ ಕ್ರಿಮಿನಲ್ ಕೇಸ್ ಕೂಡ ಮುಂದುವರೆಯಲಿದೆ.
ಕೆಂಪೇಗೌಡ ಏರ್ ಪೋರ್ಟ್ ನಲ್ಲಿ ಅಕ್ರಮವಾಗಿ ಚಿನ್ನ ಸಾಗಾಟ ಮಾಡಿದ ಹಿನ್ನೆಲೆ ಸ್ಯಾಂಡಲ್ ವುಡ್ ನಟಿ ರನ್ಯಾರಾವ್ ರನ್ನು ಪೊಲೀಸರು ಅರೆಸ್ಟ್ ಮಾಡಿದ್ದರು. ಮಾರ್ಚ್ 4 ರಂದು ರನ್ಯಾಳನ್ನು ಡಿ ಆರ್ ಐ ಅಧಿಕಾರಿಗಳು ಬಂದಿಸಿದ್ದರು. .ದುಬೈನಿಂದ ಅಕ್ರಮ ಚಿನ್ನ ಸಾಗಾಟ ಮಾಡಿ ಕೆಂಪೇಗೌಡ ಅಂತರಾಷ್ಟ್ರೀಯ ಏರ್ ಪೋರ್ಟ್ ನಲ್ಲಿ ಸಿಕ್ಕಿಹಾಕಿಕೊಂಡಿದ್ದರು. ನಟ ಗಣೇಶ್ ಅಭಿನಯದ ಪಟಾಕಿ ಹಾಗೂ ಸುದೀಪ್ ಜೊತೆ ಮಾಣಿಕ್ಯ ಚಿತ್ರದಲ್ಲಿ ಮಾನಸಾ ಪಾತ್ರ ಮಾಡಿದ್ದರು. ಅಲ್ಲದೇ ತಮಿಳಿನ ಸಿನಿಮಾ ಒಂದರಲ್ಲಿ ರನ್ಯಾರಾವ್ ಕಾಣಿಸಿಕೊಂಡಿದ್ದಾರೆ.