ಬೆಂಗಳೂರು : ಕರ್ನಾಟಕ ಬಂದ್ ಯಶಸ್ವಿಗೆ ವಾಟಾಳ್ ನಾಗರಾಜ್ ಹರಸಾಹಸ ಪಡುತ್ತಿದ್ದು, ಬಂದ್ ಯಶಸ್ವಿ ಆಗಲಿ ಎಂದು ವಾಹನದ ಸಮೇತ ಮೆರವಣಿಗೆ ನಡೆಸಿದ್ದಾರೆ.
ಮಾ.22 ಕ್ಕೆ ಕರ್ನಾಟಕ ಬಂದ್ ಫಿಕ್ಸ್ ಎನ್ನುತ್ತಿರುವ ವಾಟಾಳ್ ನಾಗರಾಜ್ ಬಂದ್ ಯಶಸ್ವಿ ಆಗಲಿ ಎಂದು ನಗರದೆಲ್ಲೆಡೆ ರ್ಯಾಲಿ ನಡೆಸಿದ್ದಾರೆ. ಬಂದ್ ಗೆ ಬೆಂಬಲ ಕೊಡಿ ಎಂದು ಮನವಿ ಮಾಡುತ್ತಿದ್ದಾರೆ.
ಕನ್ನಡಿಗರ ಮೇಲೆ ಹಲ್ಲೆ, ದೌರ್ಜನ್ಯ, ಮರಾಠಿ ಪುಂಡರಿಂದ ಕೆ.ಎಸ್.ಆರ್.ಟಿ.ಸಿ ಬಸ್ ಕಂಡಕ್ಟರ್ ಮೇಲೆ ಹಲ್ಲೆ ಖಂಡಿಸಿ ಹಾಗೂ ಮೇಕೆದಾಟು ಸೇರಿದಂತೆ ಹಲವು ನೀರಾವರಿ ಯೋಜನೆ ಜಾರಿಗೆ ಆಗ್ರಹಿಸಿ ಕನ್ನಡ ಪರ ಸಂಘಟನೆ ಹೋರಾಟಗಾರ ವಾಟಾಳ್ ನಾಗರಾಜ್ ಮಾರ್ಚ್ 22ರಂದು ಅಖಂಡ ಕರ್ನಾಟಕ ಬಂದ್ ಗೆ ಕರೆ ನೀಡಿದ್ದಾರೆ.
ಮಾರ್ಚ್ 22ರಂದು ಕರೆ ನೀಡಿರುವ ಕರ್ನಾಟಕ ಬಂದ್ ಗೆ ಕೆಲ ಸಂಘಟನೆಗಳು ಬೆಂಬಲ ಘೋಷಿಸಿದ್ದರೆ, ಇನ್ನು ಕೆಲ ಸಂಘಟನೆಗಳು ನೈತಿಕ ಬೆಂಬಲ ಮಾತ್ರ ಘೋಷಿಸಿಸಿದ್ದಾರೆ. ಬಂದ್ ಮಾಡಲ್ಲ ಎಂದಿದ್ದಾರೆ.