BIG NEWS : ಇಂದು ನಟ ಸಾರ್ವಭೌಮ ಡಾ.ರಾಜ್’ಕುಮಾರ್ ಪುಣ್ಯಸ್ಮರಣೆ : ನುಡಿ ನಮನ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ.!

ಬೆಂಗಳೂರು : ಇಂದು ನಟ ಸಾರ್ವಭೌಮ ಡಾ.ರಾಜ್’ಕುಮಾರ್ ಅವರ 19 ನೇ ಪುಣ್ಯಸ್ಮರಣೆ . ಈ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಅವರು ನುಡಿ ನಮನ ಸಲ್ಲಿಸಿದ್ದಾರೆ.

ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಸಿಎಂ ಸಿದ್ದರಾಮಯ್ಯ ‘ನಟನೆ, ಗಾಯನ, ಕನ್ನಡಪ್ರೇಮ ಮತ್ತು ಜನರೆಡೆಗಿನ ಪ್ರೀತಿ ರಾಜ್ಕುಮಾರ್ ಅವರನ್ನು ಜನಮಾನಸದಲ್ಲಿ ಶಾಶ್ವತವಾಗಿಸಿದೆ. ಆಸ್ತಿ, ಅಂತಸ್ತು, ಶ್ರೇಯಸ್ಸು ಬಂದಂತೆಲ್ಲ ಮತ್ತಷ್ಟು ವಿನಮ್ರನಾಗುತ್ತಾ ಹೋದ ಅಪರೂಪದ ಮನುಷ್ಯ ರಾಜ್ಕುಮಾರ್. ಪ್ರತಿ ಬಾರಿ ಎದುರಾದಾಗಲೂ ನನ್ನನ್ನು ” ಓಹೋ ನಮ್ಮ ಕಾಡಿನವರು ಬನ್ನಿ, ಬನ್ನಿ” ಎಂದು ಪ್ರೀತಿಯಿಂದ ಕರೆದಪ್ಪಿಕೊಳ್ಳುತ್ತಿದ್ದ ರಾಜಣ್ಣನವರು ಸಮಾಜಮುಖಿಯಾಗಿ ಬದುಕಿ, ಉಳಿದವರಿಗೊಂದು ಆದರ್ಶದ ಹಾದಿ ಬಿಟ್ಟುಹೋಗಿದ್ದಾರೆ. ಆ ಹಾದಿಯಲ್ಲಿ ನಾವು, ನೀವು ಎಲ್ಲರೂ ಸಾಗೋಣ. ನಟಸಾರ್ವಭೌಮನ ಪುಣ್ಯಸ್ಮರಣೆಯಂದು ನನ್ನ ನುಡಿನಮನಗಳು’ ಎಂದು ಟ್ವೀಟ್ ಮಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read