ಬೆಂಗಳೂರು : 2025- 26ನೇ ಸಾಲಿನ ಪಠ್ಯಪುಸ್ತಕ ವಿತರಣೆ ಬಗ್ಗೆ ರಾಜ್ಯದ ಎಲ್ಲಾ ಶಾಲೆಗಳಿಗೆ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ಏನಿದೆ ಸುತ್ತೋಲೆಯಲ್ಲಿ..?
2025-26ನೇ ಶೈಕ್ಷಣಿಕ ಸಾಲಿಗೆ ಪಠ್ಯಪುಸ್ತಕ, ಅಭ್ಯಾಸ ಪುಸ್ತಕ ಹಾಗೂ ದಿನಚರಿಗಳ ನಿರ್ವಹಣೆ ಕುರಿತು ಈಗಾಗಲೇ ಉಲ್ಲೇಖ (1) ರ ಸುತ್ತೋಲೆಯಲ್ಲಿ ಸೂಚಿಸಲಾಗಿರುತ್ತದೆ. ಶಾಲಾ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ಸಕಾಲದಲ್ಲಿ ಲಭ್ಯಗೊಳಿಸಬೇಕಾಗಿರುವುದರಿಂದ ಈಗಾಗಲೇ ತಾಲ್ಲೂಕು ಹಂತಕ್ಕೆ ಶೇ.50 ರಷ್ಟು ಪಠ್ಯಪುಸ್ತಕಗಳು ಸರಬರಾಜಾಗಿದ್ದಲ್ಲಿ ಅಂತಹ ತಾಲ್ಲೂಕುಗಳಲ್ಲಿ ಎಲ್ಲಾ ಪಠ್ಯಪುಸ್ತಕ, ಅಭ್ಯಾಸ ಪುಸ್ತಕ ಹಾಗೂ ದಿನಚರಿಗಳನ್ನು ಆಯಾ ಶಾಲಾ ಬೇಡಿಕೆಗೆ ಅನುಗುಣವಾಗಿ ದಿನಾಂಕ:23.04.2025 ರಿಂದ ಆಯಾ ಶಾಲೆಗಳಿಗೆ ಸಾಗಾಣಿಕೆ ಮಾಡಿ ನಿಯಮಾನುಸಾರ ವಿತರಿಸಲು ಕ್ರಮವಹಿಸಲು ತಿಳಿಸಿದೆ. ಉಚಿತ ಪಠ್ಯಪುಸ್ತಕಗಳನ್ನು ವಿತರಿಸಲು ಸಾಗಾಣಿಕ ವೆಚ್ಚವನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡಲು ಕ್ರಮವಹಿಸಲಾಗುವುದು.
ಮಾರಾಟ ಪಠ್ಯಪುಸ್ತಕಗಳನ್ನು ಆಯಾ ಶಾಲೆಗಳ ಬೇಡಿಕೆಯನ್ವಯ ಶೇ.10 ರಷ್ಟು ಮುಂಗಡ ಹಣ ಪಾವತಿಸಿರುವ ಶಾಲೆಗಳು ಶೇ.100 ರಷ್ಟು ಹಣ ಪಾವತಿಸಿದ ನಂತರ ಹಾಗೂ ಉಲ್ಲೇಖ (2) ರ ಜ್ಞಾಪನ ಪತ್ರಗಳಲ್ಲಿ ತಿಳಿಸಿರುವಂತೆ ಹಿಂದಿನ ಸಾಲುಗಳ ಬಾಕಿ ಮೊತ್ತವನ್ನು ಪಾವತಿಸಿರುವ ಶಾಲೆಗಳಿಗೆ ಶೇ.100 ವಠ್ಯಪುಸ್ತಕಗಳನ್ನು ವಿತರಿಸಲು ತಿಳಿಸಿದೆ. ಸಮಾಜ ಕಲ್ಯಾಣ ಇಲಾಖೆ ಮತ್ತು ಇತರೆ ಅಲ್ಪಸಂಖ್ಯಾತ ಇಲಾಖೆಗಳಿಂದ ಅನುಷ್ಠಾನಗೊಂಡಿರುವ ಶಾಲೆಗಳಿಗೆ ಬೇಡಿಕೆಯನ್ನಯ ಪೂರ್ಣ ಪ್ರಮಾಣದ ಪಠ್ಯಪುಸ್ತಕಗಳನ್ನು ವಿತರಿಸುವುದು.
ಶೇ.10 ರಷ್ಟು ಮುಂಗಡ ಹಣ ಪಾವತಿಸದೇ ಇರುವ ಶಾಲೆಗಳು ಪಠ್ಯಪುಸ್ತಕಗಳ ಬೇಡಿಕೆ ಅನ್ವಯ ಶೇ.100 ರಷ್ಟು ಹಣ ಪಾವತಿಸಿ ಖರೀದಿಸಲು ಕೋರಿದ್ದಲ್ಲಿ ಅಂತಹ ಖಾಸಗಿ ಶಾಲೆಗಳಿಗೆ ಜೀಷ್ಠತೆ ಆಧಾರದ ಮೇಲೆ ಪಠ್ಯಪುಸ್ತಕಗಳನ್ನು ವಿತರಿಸಲು ತಿಳಿಸಿದೆ ಹಾಗೂ ಉಲ್ಲೇಖ (3) ರ ಸುತ್ತೋಲೆಯಂತೆ 2023-24, 2024-25 ನೇ ಸಾಲಿನ ಬಾಕಿ ಮೊತ್ತವನ್ನು NEFT ಮೂಲಕ ಹಾಗೂ 2025-26ನೇ ಸಾಲಿನ ಸಲ್ಲಿಕೆಯಾಗಿರುವ ಬೇಡಿಕೆಯನ್ವಯ ಕಡ್ಡಾಯವಾಗಿ Payment gateway ಮೂಲಕವೇ ಪೂರ್ಣ ಮೊತ್ತವನ್ನು ಪಾವತಿಸಿಕೊಂಡು ಪಠ್ಯಪುಸ್ತಕಗಳನ್ನು ವಿತರಿಸುವುದು. ಪಠ್ಯಪುಸ್ತಕಗಳನ್ನು ಶಾಲೆಗಳಿಗೆ ವಿತರಿಸಿದ ನಂತರ ವಿದ್ಯಾರ್ಥಿವಾರು SATS ತಂತ್ರಾಂಶದಲ್ಲಿ ಕಡ್ಡಾಯವಾಗಿ ಆ ದಿನವೇ ದಾಖಲಿಸಲು ಸಹ ಸೂಚಿಸಿದೆ.
