BIG NEWS : 2024-25ನೇ ಸಾಲಿನ ‘RTE’ ಶುಲ್ಕ ಮರುಪಾವತಿ ಕುರಿತು ‘ಶಿಕ್ಷಣ ಇಲಾಖೆ’ ಮಹತ್ವದ ಆದೇಶ.!

ಬೆಂಗಳೂರು : 2024-25ನೇ ಸಾಲಿನ ಆರ್.ಟಿ.ಇ. ಶುಲ್ಕ ಮರುಪಾವತಿ ಕುರಿತು ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ಮೇಲಿನ ವಿಷಯ ಹಾಗೂ ಉಲ್ಲೇಖಗಳಿಗೆ ಸಂಬಂಧಿಸಿದಂತೆ, ಶಿಕ್ಷಣ ಹಕ್ಕು ಕಾಯ್ದೆ 2009ರ ಸೆಕ್ಷನ್ 12(1)(ಸಿ) ಅಡಿ ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ದಾಖಲಾದ ಮಕ್ಕಳ 2024-25ನೇ ಸಾಲಿನ ಆರ್ೂ.ಟಿ.ಇ. ಶುಲ್ಕ ಮರುಪಾವತಿಗೆ ಶಾಲೆಗಳು ಆನ್‌ಲೈನ್ ತಂತ್ರಾಂಶದ ಮೂಲಕ ಬೇಡಿಕೆ ಸಲ್ಲಿಸಲು ದಿನಾಂಕ : 30.10.2024 ರಿಂದ 31.01.2025 ರವರೆಗೆ ತಂತ್ರಾಂಶ ಬಿಡುಗಡೆ ಮಾಡಿ ಶಾಲೆಗಳು ಪ್ರಸ್ತಾವನೆ ಸಲ್ಲಿಸಲು ಅನುಸರಿಸಬೇಕಾದ ಕ್ರಮಗಳು ಮತ್ತು ಈ ಪ್ರಸ್ತಾವನೆಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು/ಉಪನಿರ್ದೇಶಕರು (ಆಡಳಿತ)/ಆಯುಕ್ತರು/ಅಪರ ಆಯುಕ್ತರ ಕಛೇರಿ ಹಂತಗಳಲ್ಲಿ ಇತ್ಯರ್ಥಪಡಿಸಲು ಪಾಲಿಸಬೇಕಾದ ಕ್ರಮಗಳ/ಜವಾಬ್ದಾರಿಗಳ ಬಗ್ಗೆ ಉಲ್ಲೇಖ (6) ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಉಲ್ಲೇಖ (6)ರ ಸುತ್ತೋಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಜವಾಬ್ದಾರಿಗಳ ಕ್ರಮ ಸಂಖ್ಯೆ : 03 ರಲ್ಲಿ “2012-13 ರಿಂದ 2015-16 ನೇ ಸಾಲಿನವರೆಗೆ ಶಾಲೆಗಳಿಗೆ ಪಾವತಿಯಾಗಿರುವ ಆರ್.ಟಿ.ಇ. ಶುಲ್ಕ ಮರುಪಾವತಿಗೆ ಸಂಬಂಧಿಸಿದಂತೆ ನಡೆಸಲಾಗಿರುವ ತಪಾಸಣೆಯ ವರದಿಯನ್ವಯ ಶಾಲೆಗಳಿಗೆ ಹೆಚ್ಚುವರಿ ಪಾವತಿಯಾಗಿದ್ದಲ್ಲಿ ಅಂತಹ ಶಾಲೆಗಳು 2024-25ನೇ ಸಾಲಿನ ಆರ್ರ.ಟಿ.ಇ. ಶುಲ್ಕ ಮರುಪಾವತಿಗೆ ಬೇಡಿಕೆ ಸಲ್ಲಿಸಿದ್ದಲ್ಲಿ ಹೆಚ್ಚುವರಿ ಪಾವತಿ ಮೊತ್ತವನ್ನು ಸರ್ಕಾರಕ್ಕೆ ಮರು ಜಮೆ ಮಾಡಿರುವ ಕುರಿತು ಖಾತ್ರಿಪಡಿಸಿಕೊಂಡು ಪ್ರಸ್ತಾವನೆಯನ್ನು ಇತ್ಯರ್ಥಪಡಿಸುವುದು. ಹೆಚ್ಚುವರಿ ಪಾವತಿ ಮೊತ್ತವನ್ನು ಮರು ಜಮೆ ಮಾಡದ ಶಾಲೆಗಳ ಪ್ರಸ್ತಾವನೆಯನ್ನು ಹಿಂದಿರುಗಿಸಿ ಜಮೆ ಮಾಡಿದ ನಂತರ ಪರಿಶೀಲಿಸಿ ಇತ್ಯರ್ಥಪಡಿಸುವುದು. ಹೆಚ್ಚುವರಿ ಮೊತ್ತವನ್ನು ಸರ್ಕಾರಕ್ಕೆ ಜಮೆ ಮಾಡದ ಶಾಲೆಗಳ ಪ್ರಸ್ತಾವನೆಗಳು ಅನುಮೋದನೆಗೊಂಡಲ್ಲಿ ಸಂಬಂಧಿಸಿದ ಕ್ಷೇತ್ರಶಿಕ್ಷಣಾಧಿಕಾರಿಗಳನ್ನೇ ನೇರ ಹೊಣೆಗಾರನ್ನಾಗಿ ಮಾಡಲಾಗುವುದು.” ಎಂದು ತಿಳಿಸಲಾಗಿತ್ತು.

ಆರ್.ಟಿ.ಇ. ಶುಲ್ಕ ಹೆಚ್ಚುವರಿ ಮರುಪಾವತಿಯ ತಪಾಸಣಾ ವರದಿಗಳು ಸಲ್ಲಿಕೆಯಾಗಿರುವ ಜಿಲ್ಲೆಗಳಲ್ಲಿ ಶಾಲೆಗಳು ಪಾವತಿಯಾಗಿರುವ ಹೆಚ್ಚುವರಿ ಶುಲ್ಕವನ್ನು ಸರ್ಕಾರಕ್ಕೆ ಮರುಜಮೆ ಮಾಡಿರುವ ಕುರಿತು ಮಾಹಿತಿಯನ್ನು ಸಲ್ಲಿಸುವವರೆಗೆ ಕಾಯದೇ ತಮ್ಮ ಲಾಗಿನ್ಗೆ ಸ್ವೀಕೃತವಾಗುವ ಪ್ರಸ್ತಾವನೆಗಳನ್ನು ತಕ್ಷಣ ನಿಯಮಾನುಸಾರ ಪರಿಶೀಲಿಸಿ ಇತ್ಯರ್ಥಪಡಿಸಲು ಕೆಳಗಿನಂತೆ ಅಗತ್ಯ ಕ್ರಮ ಕೈಗೊಳ್ಳುವುದು.

ಈವರೆವಿಗೆ ತಮ್ಮ ವ್ಯಾಪ್ತಿಯ ಶಾಲೆಗಳಿಗೆ ಪಾವತಿಯಾಗಿರುವ ಆರ್.ಟಿ.ಇ ಶುಲ್ಕ ಮರುಪಾವತಿಯ ಮಾಹಿತಿಯನ್ನು ನಿಯಮಾನುಸಾರ ಪರಿಶೀಲಿಸಿ, ಯಾವುದೇ ಶಾಲೆಗೆ ಹೆಚ್ಚುವರಿ ಮೊತ್ತ ಪಾವತಿಯಾಗಿದೆಯೇ ಎಂಬುದನ್ನು ನಿಖರವಾಗಿ ಖಾತ್ರಿಪಡಿಸಿಕೊಳ್ಳುವುದು. ಯಾವುದೇ ಶಾಲೆಗೆ ಹೆಚ್ಚುವರಿ ಶುಲ್ಕ ಮರುಪಾವತಿಯಾಗಿರುವುದು ಖಾತ್ರಿಯಾದ ಪ್ರಕರಣಗಳಲ್ಲಿ ಅಂತಹ ಪ್ರಸ್ತಾವನೆಗಳು ಎಲ್ಲಾ ಹಂತಗಳಲ್ಲಿ ಅನುಮೋದನೆಗೊಂಡ ನಂತರ ಮಂಜೂರಾತಿ ಆದೇಶ ಮುದ್ರಿಸಿ (Sanction order generate) ಶಾಲೆಗಳಿಗೆ ಬಿಲ್ ಪಾವತಿ ಮಾಡುವ ಸಂದರ್ಭದಲ್ಲಿ ಹೆಚ್ಚುವರಿಯಾಗಿ ಪಾವತಿಯಾಗಿರುವ ಮೊತ್ತವನ್ನು ಹೊರತುಪಡಿಸಿ ಬಾಕಿ ಮೊತ್ತವನ್ನು ಶಾಲೆಗಳಿಗೆ ಬಿಡುಗಡೆ ಮಾಡಲು ಅಗತ್ಯ ಕ್ರಮ ವಹಿಸಲು ತಿಳಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read