BIG NEWS : ಸ್ಯಾಂಡಲ್ ವುಡ್ ಗೆ ಫಲಿಸಿದ ‘ಪೂಜಾಫಲ’ ; ‘ನ್ಯಾಷನಲ್ ಅವಾರ್ಡ್’ ನಲ್ಲಿ ಕನ್ನಡ ಚಿತ್ರಗಳ ದರ್ಬಾರ್..!

ಬೆಂಗಳೂರು : ಸ್ಯಾಂಡಲ್ ವುಡ್ ಗೆ ‘ಪೂಜಾಫಲ’ ಫಲಿಸಿದಂತೆ ಆಗಿದ್ದು, ನ್ಯಾಷನಲ್ ಅವಾರ್ಡ್ ನಲ್ಲಿ ಕನ್ನಡ ಚಿತ್ರಗಳು ದರ್ಬಾರ್ ನಡೆಸಿದೆ.

ಹೌದು. ಸ್ಯಾಂಡಲ್ ವುಡ್ ಒಳಿತಿಗಾಗಿ ಇತ್ತೀಚೆಗೆ ಹೋಮ, ಹವನ, ನಾಗಾರಾಧನೆ ಏರ್ಪಡಿಸಲಾಗಿತ್ತು. ದರ್ಶನ್ ಬಿಡುಗಡೆಯಾಗಬೇಕು, ಕನ್ನಡ ಚಿತ್ರರಂಗಕ್ಕೆ ಒಳ್ಳೆಯದಾಗಬೇಕು. ಸಿನಿಮಾಗಳು ಚೆನ್ನಾಗಿ ಓಡಬೇಕು ಎಂದು ಸ್ಯಾಂಡಲ್ ವುಡ್ ಕಳೆದ 2 ದಿನ ಹೋಮ ಹಾಗೂ ವಿಶೇಷ ಪೂಜೆ ನೆರವೇರಿಸಿತ್ತು. ಇದರ ಫಲ ಎಂಬಂತೆ ಸ್ಯಾಂಡಲ್ ವುಡ್ ಗೆ  ಹಲವು ರಾಷ್ಟ್ರೀಯ ಪ್ರಶಸ್ತಿಗಳು ಒಲಿದಿವೆ.

ಷನಲ್ ಅವಾರ್ಡ್ ಗಳಲ್ಲಿ ಕನ್ನಡದ ಸಿನಿಮಾಗಳು ದರ್ಬಾರ್ ಮಾಡಿವೆ. ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಹಾಗೂ ಯಶ್ ನಟನೆಯ ಕೆಜಿಎಫ್ ಚಿತ್ರಗಳಿಗೆ ಎರಡೆರಡು ರಾಷ್ಟ್ರ ಪ್ರಶಸ್ತಿ ಲಭ್ಯವಾಗಿದ್ದು, ಕನ್ನಡಕ್ಕೆ ಒಟ್ಟು ಆರು ಪ್ರಶಸ್ತಿ ಬಂದಿರುವುದು ಹೆಮ್ಮೆಯ ಸಂಗತಿಯಾಗಿದೆ.70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, ಕನ್ನಡದ ಕಾಂತಾರ, ಕೆಜಿಎಫ್ ಚಿತ್ರಗಳು ತಲಾ ಎರಡು ಪ್ರಶಸ್ತಿ ಹಾಗೂ ಮದ್ಯಂತರ, ಅತ್ಯುತ್ತಮ ಸಂಕಲನ ಸುರೇಶ್ ಅರಸ್ ಅವರಿಗೆ ಪ್ರಶಸ್ತಿ ಪ್ರಕಟವಾಗಿದೆ.

ವಿಜೇತರ ಪಟ್ಟಿ

ಅತ್ಯುತ್ತಮ ಚಿತ್ರ: ಆಟ್ಟಂ
ಅತ್ಯುತ್ತಮ ನಟಿ: ಮಾನ್ಸಿ ಪರಾಖ್
ಅತ್ಯುತ್ತಮ ಪೋಷಕ ನಟಿ: ನೀನಾ ಗುಪ್ತಾ
ಅತ್ಯುತ್ತಮ ಮನರಂಜನಾ ಚಿತ್ರ: ಕಾಂತಾರ
ಅತ್ಯುತ್ತಮ ನಟ: ರಿಷಬ್ ಶೆಟ್ಟಿ (ಕಾಂತಾರ)
ಅತ್ಯುತ್ತಮ ನಟಿ: ನಿತ್ಯಾ ಮೆನನ್ (ತಮಿಳು: ತಿರುಚಿತ್ರಂಬಲಂ)
ಅತ್ಯುತ್ತಮ ತೆಲುಗು ಪ್ರಾದೇಶಿಕ ಸಿನಿಮಾ- ಕಾರ್ತಿಕೇಯ 2
ವಿಶೇಷ ಪ್ರಶಸ್ತಿ: ನಟ ಮನೋಜ್ ಬಾಜ್ಪೇಯಿ- ಚಿತ್ರ: ಗುಲ್ಮೋಹರ್
ಅತ್ಯುತ್ತಮ ಚೊಚ್ಚಲ ನಿರ್ದೇಶಕ- ಬಸ್ತಿ ದಿನೇಶ್ ಶೆಣೈ (ಮಧ್ಯಂತರ-ಕಿರುಚಿತ್ರ-ಕನ್ನಡ)

ಅತ್ಯುತ್ತಮ ಸಾಹಸ ನಿರ್ದೇಶನ: ಕೆಜಿಎಫ್: ಚಾಪ್ಟರ್ 2
ಅತ್ಯುತ್ತಮ ಕನ್ನಡ ಪ್ರಾದೇಶಿಕ ಸಿನಿಮಾ- ಕೆಜಿಎಫ್: ಚಾಪ್ಟರ್ 2
ಅತ್ಯುತ್ತಮ ಮರಾಠಿ ಪ್ರಾದೇಶಿಕ ಸಿನಿಮಾ- ವಾಲ್ವಿ
ಅತ್ಯುತ್ತಮ ಗಾಯಕ: ಅರಿಜಿತ್ ಸಿಂಗ್ (ಬ್ರಹ್ಮಾಸ್ತ್ರ)
ಅತ್ಯುತ್ತಮ ತಮಿಳು ಪ್ರಾದೇಶಿಕ ಸಿನಿಮಾ- ಪೊನ್ನಿಯಿನ್ ಸೆಲ್ವನ್ 1

ಅತ್ಯುತ್ತಮ ಛಾಯಾಗ್ರಹಣ: ರವಿ ವರ್ಮನ್ (ಪೊನ್ನಿಯಿನ್ ಸೆಲ್ವನ್ 1)
ಅತ್ಯುತ್ತಮ ಸಂಗೀತ ನಿರ್ದೇಶನ (ಹಿನ್ನೆಲೆ ಸಂಗೀತ): ಎ ಆರ್ ರೆಹಮಾನ್ (ಪೊನ್ನಿಯಿನ್ ಸೆಲ್ವನ್
ಅತ್ಯುತ್ತಮ ಸಂಗೀತ ನಿರ್ದೇಶನ: ಪ್ರೀತಂ (ಬ್ರಹ್ಮಾಸ್ತ್ರ)
ಅತ್ಯುತ್ತಮ ನೃತ್ಯ ನಿರ್ದೇಶನ: ತಿರುಚಿತ್ರಂಬಲಂ (ತಮಿಳು)

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read