BIG NEWS: ಭಾರತಕ್ಕೆ ಶೇ. 10ರಷ್ಟು ಅಡುಗೆ ಅನಿಲ ಪೂರೈಸಲು ಅಮೆರಿಕ ಜತೆ ಐತಿಹಾಸಿಕ ಒಪ್ಪಂದ

ನವದೆಹಲಿ: ಭಾರತಕ್ಕೆ ಶೇಕಡ 10 ರಷ್ಟು ಅಡುಗೆ ಅನಿಲವನ್ನು ಅಮೆರಿಕ ಪೂರೈಸಲಿದೆ. ಈ ಕುರಿತಾದ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ಬೆಲೆ ನಿಯಂತ್ರಣಕ್ಕೆ ಬಲ ಬಂದಿದೆ. ಅಮೆರಿಕದಿಂದ ವಾರ್ಷಿಕ 2.2 ದಶಲಕ್ಷ ಟನ್ ಎಲ್ಪಿಜಿ ಪೂರೈಕೆ ಮಾಡಿಕೊಳ್ಳಲಾಗುವುದು.

ಭಾರತ, ಅಮೆರಿಕ ನಡುವೆ ವ್ಯಾಪಾರ ಒಪ್ಪಂದ ಅಂತಿಮ ಹಂತಕ್ಕೆ ತಲುಪಿದೆ. ಇದರ ನಡುವೆ ಅಮೆರಿಕದಿಂದ ವಾರ್ಷಿಕ 2.2 ದಶಲಕ್ಷ ಟನ್ ಅಡುಗೆ ಅನಿಲ ಆಮದು ಮಾಡಿಕೊಳ್ಳುವ ಒಪ್ಪಂದಕ್ಕೆ ಭಾರತ ಸಹಿ ಹಾಕಿದೆ. ಇದು ಭಾರತದ ವಾರ್ಷಿಕ ಒಟ್ಟು ಎಲ್ಪಿಜಿ ಆಮದಿನ ಶೇಕಡ 10ರಷ್ಟು ಆಗಿದೆ.

ಭಾರತದ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು 2026ರ ಜನವರಿಯಿಂದ ಅಮೆರಿಕ ಕರಾವಳಿಯಿಂದ ವಾರ್ಷಿಕ ಸುಮಾರು 2.2 ದಶಲಕ್ಷ ಟನ್ ಎಲ್ಪಿಜಿ ಆಮದು ಮಾಡಿಕೊಳ್ಳಲಿವೆ. 40,000 ಕೋಟಿ ರೂ. ವ್ಯಯಿಸುತ್ತಿದ್ದು, ಜಾಗತಿಕ ಮಟ್ಟದಲ್ಲಿ ಬೆಲೆ ಏರಿಕೆಯ ಕಾರಣ ಸರ್ಕಾರದ ವೆಚ್ಚವೂ ಹೆಚ್ಚಾಗುತ್ತಿದೆ. ಎಲ್‌ಪಿಜಿ ಬೆಲೆ ಸ್ಥಿರತೆ ಸರ್ಕಾರದ ಸಬ್ಸಿಡಿ ವೆಚ್ಚವನ್ನು ಕಡಿಮೆ ಮಾಡಲಿದ್ದು, ಜನರಿಗೆ ಕಡಿಮೆ ದರದಲ್ಲಿ ಅಡಗೆ ಅನಿಲ ಪೂರೈಕೆಗೆ ಅನುಕೂಲವಾಗುತ್ತದೆ.

ಜಾಗತಿಕ ಮಟ್ಟದಲ್ಲಿ ಕಳೆದ ವರ್ಷ ಎಲ್‍ಪಿಜಿ ದರ ಶೇಕಡ 60 ಕ್ಕಿಂತಲೂ ಹೆಚ್ಚು ಏರಿಕೆಯಾಗಿತ್ತು. ಹೀಗಿದ್ದರೂ ಉಜ್ವಲ ಫಲಾನುಭವಿಗಳಿಗೆ 500- 550ರೂ. ಗೆ ಎಲ್‍ಪಿಜಿ ಸಿಲಿಂಡರ್ ಪೂರೈಸಲಾಗಿದೆ.

ಭಾರತದ ಎಲ್‌ಪಿಜಿ ಪೂರೈಕೆಯಲ್ಲಿ ಆಮದು ಪಾಲು ಶೇಕಡ 60ರಷ್ಟು ಇದೆ. ಪ್ರಸ್ತುತ ಸೌದಿ ಅರೇಬಿಯಾ, ಯುಎಇ, ಕತಾರ್, ಮತ್ತು ಕುವೈತ್ ಗಳಿಂದ ಪೂರೈಕೆಯಾಗುತ್ತಿದೆ. ಅಮೆರಿಕದೊಂದಿಗಿನ ಒಪ್ಪಂದದಿಂದ ಭಾರತಕ್ಕೆ ಅನುಕೂಲ ದೊರೆಯಲಿದೆ, ಮಧ್ಯಪ್ರಾಚ್ಯದ ಕೆಲವೇ ದೇಶಗಳ ಮೇಲಿನ ಭಾರತದ ಅವಲಂಬನೆ ಕಡಿಮೆಯಾಗಲಿದ್ದು, ಪೂರೈಕೆ ಸರಪಳಿ ವಿಸ್ತರಣೆಯಾಗಲಿದೆ. ಅಲ್ಲದೆ, ಬೆಲೆ ಚೌಕಾಸಿಗೂ ಅವಕಾಶ ಸಿಗಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read