BIG NEWS : ಬೆಂಗಳೂರಲ್ಲಿ ‘ಆಟೋ ಮೀಟರ್ ‘ ದರ ಪರಿಷ್ಕರಿಸಿ ಅಧಿಕೃತ ಆದೇಶ, ಆ. 1 ರಿಂದ ಜಾರಿ |Auto fare hike


ಬೆಂಗಳೂರು : ಬೆಂಗಳೂರಿಗರೇ..ಇಲ್ನೋಡಿ.! ‘ಆಟೋ ಮೀಟರ್ ‘ ದರ ಪರಿಷ್ಕರಿಸಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದ್ದು, ಆಗಸ್ಟ್ 1 ರಿಂದ ಜಾರಿಯಾಗಲಿದೆ.

ಬೆಂಗಳೂರು ನಗರ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ಆಟೋರಿಕ್ಷಾ ಮೀಟರ್ ದರಪರಿಷ್ಕರಣೆ ಕುರಿತು ಕೂಲಂಕುಷವಾಗಿ ಪರಿಶೀಲಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಟೋರಿಕ್ಷಾ ದರಗಳನ್ನು ಈ ಕೆಳಕಂಡಂತೆ ಪರಿಷ್ಕರಣೆ ಮಾಡಿ ದಿನಾಂಕ: 01-08-2025 ರಿಂದ ಜಾರಿಗೆ ಬರುವಂತೆ ಆದೇಶಿಸಿದೆ.

1) ಕನಿಷ್ಠ ದರ ಮೊದಲ 2.00 ಕಿ.ಮೀ.ಗೆ ದರ : ರೂ.36/- (ರೂ.ಮುವತ್ತಾರು ಮಾತ್ರ ಮೂರು ಜನ ಪ್ರಯಾಣಿಕರು
2) ನಂತರದ ಪ್ರತಿ ಕಿಲೋಮೀಟರ್ ದರ : ರೂ.18/- (ರೂ.ಹದಿನೆಂಟು ಮಾತ್ರ ಮೂರು ಜನ ಪ್ರಯಾಣಿಕರು
3) ಕಾಯುವಿಕೆ ದರ
ಅ) ಮೊದಲ ಐದು ನಿಮಿಷ: ಉಚಿತ
ಆ) ಮೊದಲ ಐದು ನಿಮಿಷದ ನಂತರ : ಪ್ರತಿ ಹದಿನೈದು ನಿಮಿಷ ಅಥವಾ ಅದರ ಭಾಗಕ್ಕೆ- 10 rs.
4) ಪ್ರಯಾಣಿಕರ ಲಗೇಜು ದರ
ಅ) ಮೊದಲ 20 ಕೆ.ಜಿ.ಗೆ : ಉಚಿತ
ಆ) ಮೊದಲ 20ಕೆ.ಜಿ.ಯಿಂದ ನಂತರ
ಪ್ರತಿ 20 ಕೆ.ಜಿ.ಗೆ ಅಥವಾ ಅದರ ಭಾಗಕ್ಕೆ 10 rs.

ಇ) ಗರಿಷ್ಠ ಪ್ರಯಾಣಿಕರ ಲಗೇಜುಗಳು 50 ಕೆ.ಜಿ.ಗೆ


5) ರಾತ್ರಿ ವೇಳೆ ದರ
ಸಾಮಾನ್ಯ ದರ+ಸಾಮಾನ್ಯ ದರದ ಅರ್ಧಪಟ್ಟು ಹೆಚ್ಚು (ರಾತ್ರಿ 10-00 ರಿಂದ ಬೆಳಗಿನ ಜಾವ 5-00 ಘಂಟೆವರೆಗೆ)

ಸೂಚನೆ : ಪ್ರಾದೇಶಿಕ ಸಾರಿಗೆ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟಿರುವ ನಿಗದಿತ ಪರಿಷ್ಕೃತ ದರದ ಮೂಲ ಪಟ್ಟಿಯನ್ನು ಪ್ರತಿಯೊಂದು ಆಟೋರಿಕ್ಷಾದಲ್ಲಿ ಪ್ರಮುಖ ಸ್ಥಾನದಲ್ಲಿ ಪ್ರದರ್ಶಿಸಬೇಕು.
ಪರಿಷ್ಕೃತ ದರಗಳ ಮೀಟರಿನಲ್ಲಿ ಪ್ರದರ್ಶನವಾಗುವಂತೆ ಮೀಟರ್ಗಳನ್ನು ದಿನಾಂಕ: 31-10-2025 (90 ದಿನಗಳು) ರೊಳಗಾಗಿ ಪುನಃ ಸತ್ಯಾಪನೆ ಮಾಡಿ ಮುದ್ರೆ ಹಾಕಿಸಿಕೊಳ್ಳುವುದು.

    Share This Article

    Latest News

    ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

    View Results

    Loading ... Loading ...

    Most Read