ನವದೆಹಲಿ: ಲಾ ಪರೀಕ್ಷೆಗಳಿಗೆ ಕನಿಷ್ಠ ಹಾಜರಾತಿ ಕಡ್ಡಾಯವಲ್ಲ ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ. ಕನಿಷ್ಠ ಹಾಜರಾತಿ ಕೊರತೆಯ ಕಾರಣಕ್ಕೆ ದೇಶದ ಯಾವುದೇ ಕಾನೂನು ವಿದ್ಯಾರ್ಥಿಯನ್ನು ಪರೀಕ್ಷೆಗೆ ಕುಳಿತುಕೊಳ್ಳದಂತೆ ತಡೆಯಬಾರದು ಎಂದು ದೆಹಲಿ ಹೈಕೋರ್ಟ್ ಸೋಮವಾರ ತೀರ್ಪು ನೀಡಿದೆ.
2016ರಲ್ಲಿ ಸುಶಾಂತ್ ರೋಹಿಲಾ ಎಂಬ ವಿದ್ಯಾರ್ಥಿಗೆ ಕನಿಷ್ಠ ಹಾಜರಾತಿ ಇಲ್ಲದ ಕಾರಣ ಪರೀಕ್ಷೆಗೆ ಕುಳಿತುಕೊಳ್ಳಲು ಅಮಿಟಿ ವಿಶ್ವವಿದ್ಯಾಲಯ ನಿರಾಕರಿಸಿದ್ದು, ಇದರಿಂದ ಮನನೊಂದ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಪ್ರಕರಣದ ವಿಚಾರಣೆ ನಡೆಸಿದ ದೆಹಲಿಗೆ ಹೈಕೋರ್ಟ್, ಕನಿಷ್ಠ ಹಾಜರಾತಿ ಕೊರತೆಯ ಕಾರಣ ಭಾರತದಲ್ಲಿನ ಯಾವುದೇ ಮಾನ್ಯತೆ ಪಡೆದ ಕಾನೂನು ಕಾಲೇಜು, ವಿಶ್ವದ್ಯಾಲಯ ಅಥವಾ ಸಂಸ್ಥೆಯಲ್ಲಿ ದಾಖಲಾದ ಯಾವುದೇ ವಿದ್ಯಾರ್ಥಿಯನ್ನು ಪರೀಕ್ಷೆ ಬರೆಯುವುದರಿಂದ ತಪ್ಪಿಸಬಾರದು ಅಥವಾ ವೃತ್ತಿ ಜೀವನದ ಪ್ರಗತಿಯ ಮುಂದಿನ ಅನ್ವೇಷಣೆಗಳಿಂದ ತಡೆಯಬಾರದು ಎಂದು ತಿಳಿಸಿದೆ.
