ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗದ ಪತ್ರದ ಸಂಖ್ಯೆ: ಕ.ಲೋ.ಸೇ.ಆ/281/ಪ.ಶಾ(3)2022-23 ದಿನಾಂಕ:05/04/2025ರ ಅನ್ವಯ 2019ನೇ ಸಾಲಿನ ಕಿರಿಯ ಸಹಾಯಕರು/ದ್ವಿತೀಯ ದರ್ಜೆ ಸಹಾಯಕರ ಉಳಿಕೆ ಮೂಲ ವೃಂದದ ಹುದ್ದೆಗಳ ಹೆಚ್ಚುವರಿ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾದ ಆರೋಗ್ಯ ಇಲಾಖೆಗೆ ಹಂಚಿಕೆ ಮಾಡಲಾಗಿರುವ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆಯನ್ನು ಕೆಳಕಂಡ ದಿನಾಂಕ/ವಿಳಾಸದಲ್ಲಿ ಬೆಳಗ್ಗೆ 10:30 ಗಂಟೆಗೆ ನಡೆಸಲಾಗುತ್ತಿದ್ದು, ತಪ್ಪದೆ ಎಲ್ಲಾ ಮೂಲ ದಾಖಲಾತಿಗಳೊಂದಿಗೆ ಹಾಜರಾಗಲು ಸೂಚಿಸಿದೆ.
ಮೂಲ ದಾಖಲೆ ಪರಿಶೀಲನೆ ನಡೆಯುವ ಸ್ಥಳ
ಕೌನ್ಸಿಲಿಂಗ್ ಹಾಲ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ತರಬೇತಿ ಕೇಂದ್ರ ಕುಷ್ಠರೋಗ ಆಸ್ಪತ್ರೆ, ಆವರಣ, ಮಾಗಡಿ ಮುಖ್ಯ ರಸ್ತೆ, ಬೆಂಗಳೂರು 560023
ಹಾಜರು ಪಡಿಸಬೇಕಿರುವ ಮೂಲ ದಾಖಲೆಗಳು:-
- ಕೆಪಿಎಸ್ ಸಿ ಅರ್ಜಿ
- ಎಸ್.ಎಸ್.ಎಲ್.ಸಿ ಅಂಕಪಟ್ಟಿ,
- ದ್ವಿತೀಯ ಪಿ.ಯು.ಸಿ/ತತ್ಸಮಾನ ಅಂಕಪಟ್ಟಿಗಳು.
- ನಿರಾಪೇಕ್ಷಣಾ ಪತ್ರ ( NOC ) (ಸೇವೆಯಲ್ಲಿರುವ ಅಭ್ಯರ್ಥಿಗಳಿಗೆ ಮಾತ್ರ)
- ಕೆ.ಪಿ.ಎಸ್.ಸಿಗೆ ಅರ್ಜಿ ಸಲ್ಲಿಸುವಾಗ ಕೋರಲಾದ ಸಂಬಂಧಪಟ್ಟ ಎಲ್ಲಾ ಮೀಸಲಾತಿಗಳ ದಾಖಲೆಗಳು.
- ಅಭ್ಯರ್ಥಿಯ ಇತ್ತೀಚಿನ ಪಾಸ್ ಪೋರ್ಟ್ ಅಳತೆಯ 4 ಭಾವ ಚಿತ್ರಗಳು ( ಭಾವ ಚಿತ್ರದ ಹಿಂದೆ ಅಭ್ಯರ್ಥಿಯ ಹೆಸರು ಬರೆದಿರಬೇಕು.)
7.ಅಭ್ಯರ್ಥಿಯ ಗುರುತಿಗಾಗಿ ಆಧಾರ್ ಕಾರ್ಡ್ / ಪಾನ್ ಕಾರ್ಡ್ /ಪಡಿತರ ಚೀಟಿ/ಪಾಸ್ ಪೋರ್ಟ್ / ವಾಹನ ಚಾಲನ ಪರವಾನಗಿ/ಚುನಾವಣೆ ಗುರುತಿನ ಚೀಟಿ ಇವುಗಳಲ್ಲಿ ಯಾವುದಾದರೂ ಒಂದು. - ನಿಮ್ಮ ವಿಳಾಸಕ್ಕೆ ಸ್ವೀಕೃತಗೊಂಡಿರುವ ಮೂಲ ದಾಖಲೆಗಳ ಪರಿಶೀಲನೆಗೆಗಾಗಿ ಬಂದಿರುವ ಕರೆ ಪತ್ರ.
- ಎಲ್ಲಾ ಮೂಲ ದಾಖಲೆಗಳ ಎರಡು ಜೊತೆ ಜೆರಾಕ್ಸ್ ಪ್ರತಿಗಳು ಅಭ್ಯರ್ಥಿಯ ಸ್ವಯಂ ದೃಢೀಕರಣದೊಂದಿಗೆ
ಎಲ್ಲಾ ಮೂಲ ದಾಖಲೆಗಳನ್ನು ಪರಿಶೀಲನಾ ಸಮಯದಲ್ಲಿಯೇ ಹಾಜರುಪಡಿಸುವುದು. ಮತ್ತು ಯಾವುದೇ ದಾಖಲೆಗಳನ್ನು ಹಾಜರುಪಡಿಸಲು ಮತ್ತೊಂದು ಅವಕಾಶವನ್ನು ನೀಡಲಾಗುವುದಿಲ್ಲ.
ದಾಖಲಾತಿ ಪರಿಶೀಲನೆ ವೇಳೆಯಲ್ಲಿ ಮೊಬೈಲ್ ಫೋನ್ ನಿಷೇಧಿಸಿದೆ. ಅಭ್ಯರ್ಥಿಯು ಸ್ವಯಂ ಖರ್ಚಿನಲ್ಲಿ ದಾಖಲೆ ಪರಿಶೀಲನೆಗೆ ಹಾಜರಾಗತಕ್ಕದ್ದು.









