ಬೆಂಗಳೂರು : ಫೇಸ್ ಬುಕ್ , ಇನ್ ಸ್ಟಾಗ್ರಾಂ ಖಾತೆಗೂ ‘ಐಟಿ’ ರೇಡ್ ಮಾಡುವ ಪವರ್ ಐಟಿ ಅಧಿಕಾರಿಗಳಿಗೆ ಸಿಗಲಿದೆ..! ಹೌದು, ಕೇಂದ್ರ ಸರ್ಕಾರ ಹೊಸ ತೆರಿಗೆ ಮಸೂದೆಯಿಂದ ಈ ಅವಕಾಶ ಸಿಗಲಿದೆ.
ಇದುವರೆಗೆ ತೆರಿಗೆದಾರನಿಗೆ ಸೇರಿದ ಎಲೆಕ್ಟ್ರಾನಿಕ್ ಉಪಕರಣಗಳ ಪರಿಶೀಲನೆ ಅಧಿಕಾರ ಹೊಂದಿದ್ದ ಆದಾಯ ತೆರಿಗೆ ಅಧಿಕಾರಿಗಳು ಇನ್ಮುಂದೆ ತೆರಿಗೆದಾರರ ಸೋಶಿಯಲ್ ಮೀಡಿಯಾ ಖಾತೆಗಳಿಗೆ ಪ್ರವೇಶಿಸುವ ಅಧಿಕಾರ ಸಿಗಲಿದೆ. ಇನ್ಸ್ ಟಾಗ್ರಾಂ, ಫೇಸ್ ಬುಕ್, ಜಿಮೇಲ್ ಖಾತೆಗೆ ಪ್ರವೇಶಿಸುವ ಪವರ್ ಐಟಿ ಅಧಿಕಾರಿಗಳಿಗೆ ಸಿಗಲಿದೆ. ಸರ್ಕಾರ ನೂತನವಾಗಿ ಜಾರಿಗೆ ತಂದಿರುವ ಹೊಸ ಆದಾಯ ತೆರಿಗೆ ಕಾಯಿದೆಯಲ್ಲಿ ಇಂತಹದ್ದೊಂದು ಅಂಶವಿರುವುದು ತಿಳಿದು ಬಂದಿದೆ.
1961 ರ ಆದಾಯ ತೆರಿಗೆ ಕಾಯ್ದೆಯನ್ನು ಬದಲಾಯಿಸಲು ಪ್ರಯತ್ನಿಸುವ ಈ ಮಸೂದೆಯು ಶೋಧ ಮತ್ತು ವಶಪಡಿಸಿಕೊಳ್ಳುವ ಪ್ರಕರಣಗಳಲ್ಲಿ ಸಾಮಾಜಿಕ ಮಾಧ್ಯಮ, ಆನ್ಲೈನ್ ವ್ಯಾಪಾರ ಮತ್ತು ಹೂಡಿಕೆ ಖಾತೆಗಳು ಮತ್ತು ಕ್ಲೌಡ್ ಸರ್ವರ್ಗಳು ಸೇರಿದಂತೆ ಕಂಪ್ಯೂಟರ್ ವ್ಯವಸ್ಥೆಗಳು ಮತ್ತು ವರ್ಚುವಲ್ ಡಿಜಿಟಲ್ ಸ್ಥಳದ ಪ್ರವೇಶ ಕೋಡ್ ಅನ್ನು ಮೀರಿಸುವ ಅಧಿಕಾರವನ್ನು ತೆರಿಗೆ ಅಧಿಕಾರಿಗಳಿಗೆ ನೀಡುತ್ತದೆ. ಆದಾಗ್ಯೂ, ಈ ಅಧಿಕಾರವು ಜಂಟಿ ಆಯುಕ್ತರ ಶ್ರೇಣಿಗಿಂತ ಮೇಲಿನ ಅಧಿಕಾರಿಗಳಿಗೆ ಮಾತ್ರ ಲಭ್ಯವಿರುತ್ತದೆ.ಈ ಮಸೂದೆಯು ಶೋಧ ಮತ್ತು ವಶಪಡಿಸಿಕೊಳ್ಳುವ ಪ್ರಕರಣಗಳಿಗೆ ಸಂಬಂಧಿಸಿದ ಕಲಂನಲ್ಲಿ “ವರ್ಚುವಲ್ ಡಿಜಿಟಲ್ ಸ್ಪೇಸ್” ಎಂಬ ಹೊಸ ಪರಿಭಾಷೆಯನ್ನು ಒಳಗೊಂಡಿದೆ.