BIG NEWS: ಆಳಂದ ಮತಕಳವು ಬಗ್ಗೆ ಮಹತ್ವದ ಮಾಹಿತಿ ಬಹಿರಂಗ: ಒಂದು ಹೆಸರು ಅಳಿಸಲು 80 ರೂ….!

ಬೆಂಗಳೂರು: 2023ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಲಬುರಗಿ ಜಿಲ್ಲೆ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಮತಕಳವು ಯತ್ನಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ(ಎಸ್ಐಟಿ) ಮಹತ್ವದ ವಿಷಯ ಬಹಿರಂಗಪಡಿಸಿದೆ.

ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಮಾಡಲು ಪ್ರಯತ್ನ ನಡೆದಿದೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದರು. ಅಂತಹ ಪ್ರಯತ್ನಗಳನ್ನು ಖಚಿತಪಡಿಸಿರುವ ಎಸ್ಐಟಿ ಹಗರಣದಲ್ಲಿ ಭಾಗಿಯಾದ ಆರು ಆರೋಪಿಗಳನ್ನು ಗುರುತಿಸಿದೆ. ಮತದಾರರ ಪಟ್ಟಿಯಿಂದ ಹೆಸರು ಅಳಿಸಿ ಹಾಕಲು ಪ್ರತಿ ಹೆಸರಿಗೆ 80 ರೂ.ನಂತೆ ಆರೋಪಿಗಳಿಗೆ ಹಣ ಪಾವತಿಸಲಾಗಿದೆ ಎಂದು ಹೇಳಲಾಗಿದೆ.

ನಕಲಿ ಡೇಟಾ ಸೆಂಟರ್ ನಿರ್ವಾಹಕನಿಗೆ ಈ ಹಣ ಪಾವತಿಸಲಾಗಿದೆ. ಪಟ್ಟಿಯಿಂದ ಹೆಸರು ಅಳಿಸಲು 6994 ಮನವಿ ಬಂದಿದ್ದು, ಕೆಲವು ನೈಜ ಪ್ರಕರಣ ಹೊರತಾಗಿ ಉಳಿದವು ನಕಲಿ ಮನವಿಗಳಾಗಿವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read