BIG NEWS : ಕೊರೊನಾ ಆತಂಕ : ರಾಜ್ಯದ ʻಎಲ್ಲಾ ಜಿಲ್ಲಾ, ತಾಲೂಕು ಆಸ್ಪತ್ರೆʼಗಳಲ್ಲಿ ಈ ಮುಂಜಾಗ್ರತಾ ಕ್ರಮಕ್ಕೆ ಆರೋಗ್ಯ ಇಲಾಖೆ ಸೂಚನೆ

ಬೆಂಗಳೂರು : ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಕೈಗೊಳ್ಳಲು ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ಈ ಕುರಿತು ಆದೇಶ ಹೊರಡಿಸಿರುವ ಆರೋಗ್ಯ ಇಲಾಖೆ,  ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳ ಐ.ಸಿ.ಯು ಘಟಕಗಳ ಉಪಕರಣಗಳನ್ನು ಮತ್ತು ಆಕ್ಸಿಜನ್ ಸಿಲಿಂಡರ್, PSA ಆಕ್ಸಿಜನ್ ಪ್ಲಾಂಟ್, ಲಿಕ್ವಿಡ್ ಆಕ್ಸಿಜನ್ ಘಟಕಗಳ ವಾಸ್ತವ ವರದಿಯನ್ನು ವಿಭಾಗೀಯ ಜಂಟಿ ನಿರ್ದೇಶಕರು ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಜಿಲ್ಲಾ ಹಾಗೂ ತಾಲ್ಲೂಕು deputydirectormedical@gmail.com ಸೂಚಿಸಿದೆ.

1) PSA ಪ್ಲಾಂಟ್‌ಗಳ ಕಾರ್ಯವೈಖರಿ ಬಗ್ಗೆ ವರದಿ ನೀಡುವುದು.

2) Liquid Medical Oxygen tank, ಬಗ್ಗೆ ವರದಿ ಸಲ್ಲಿಸುವುದು.

3) ಮುಖ್ಯವಾಗಿ ಐ.ಸಿ.ಯು ಉಪಕರಣಗಳು ವೆಂಟಿಲೇಟರ್‌ಗಳನ್ನು ಸ್ವತಃ ಪರಿಶೀಲಿಸಿ ಕಾರ್ಯನಿರ್ವಹಣೆ ಬಗ್ಗೆ ವರದಿ ನೀಡುವುದು.

4) ಎಲ್ಲಾ Oxygen cylinder ಗಳನ್ನು ತುಂಬಿಸುವ ಬಗ್ಗೆ ಕ್ರಮ ಕೈಗೊಂಡು ವರದಿ ಸಲ್ಲಿಸುವುದು.

5) Oxygen concentrator ಬಗ್ಗೆ ತಪಾಸಣೆ ಕೈಗೊಂಡು ವರದಿ ಸಲ್ಲಿಸುವುದು.

6) Medical Gas Pipeline ಬಗ್ಗೆ ತಪಾಸಣೆ ಕೈಗೊಂಡು ವರದಿ ಸಲ್ಲಿಸುವುದು.

7) ICU ನಲ್ಲಿ ಇರುವ ಎಲ್ಲಾ ಯಂತ್ರೋಪಕರಣಗಳ ಬಗ್ಗೆ ತಪಾಸಣೆ ಮತ್ತು ಔಷಧಗಳ ಲಭ್ಯತೆ ಬಗ್ಗೆ ಕ್ರಮಕೈಗೊಳ್ಳುವುದು.

ಅದರಂತೆ, ಮುಖ್ಯವಾಗಿ ಐ.ಸಿ.ಯು ಘಟಕಗಳ ಉಪಕರಣಗಳನ್ನು ಮತ್ತು PSA ಆಕ್ಸಿಜನ್ ಪ್ಲಾಂಟ್, ಲಿಕ್ವಿಡ್ ಆಕ್ಸಿಜನ್ ಘಟಕಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲು ಮುನ್ನೆಚ್ಚರಿಕೆ ವಹಿಸುವುದರ ಕುರಿತು ಬಯೋ ಮೆಡಿಕಲ್ ಇಂಜಿನಿಯರ್‌ಗಳು ನಿಯೋಜಿಸಿರುವ ಜಿಲ್ಲೆಗಳ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಿಗೆ ಭೇಟಿ ನೀಡಿ ಕ್ರಮವಹಿಸುವುದು, ಸದರಿ ಪ್ರಯಾಣಕ್ಕೆ ತಗಲುವ ವೆಚ್ಚವನ್ನು ನಿಯಮಾನುಸಾರ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ Program Management Cost ಅಡಿಯಲ್ಲಿ ಭರಿಸುವುದು.

ಐ.ಸಿ.ಯು ಘಟಕಗಳ ಉಪಕರಣಗಳನ್ನು ಮತ್ತು PSA ಆಕ್ಸಿಜನ್ ಪ್ಲಾಂಟ್, ಲಿಕ್ವಿಡ್ ಆಕ್ಸಿಜನ್ ಘಟಕಗಳ ಉಪಕರಣಗಳ ರಿಪೇರಿಯನ್ನು  KTPP ನಿಯಮಾನುಸಾರ ಲಭ್ಯವಿರುವ ARS/AB-ArK/Untied funds ಅನುದಾನವನ್ನು ಬಳಸಿ ಯಂತ್ರೋಪಕರಣಗಳನ್ನು ರಿಪೇರಿ ಕೈಗೊಂಡು ಸುಸ್ಥಿತಿಯಲ್ಲಿಡಲು ಈ ಮೂಲಕ ಸೂಚಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read