ಬೆಂಗಳೂರು: 2025-26ನೇ ಸಾಲಿನ ಆಯವ್ಯಯ ಕಂಡಿಕ ಸಂಖ್ಯೆ 111(i) ರಂತೆ ರಾಜ್ಯದಲ್ಲಿ, ಪೂರ್ವ ಪ್ರಾಥಮಿಕ ತರಗತಿಗಳನ್ನು(LKG ಮತ್ತು UKG) ಪ್ರಾರಂಭಿಸುವ ಕುರಿತು ಸರ್ಕಾರ ಆದೇಶಿಸಿದೆ.
ಈ ಆಯವ್ಯಯ ಭಾಷಣದ ಘೋಷಣೆಯ ಅನ್ವಯ ಸರ್ಕಾರದ ಆದೇಶ ಸಂಖ್ಯೆ: ಇಪಿ176 ಪಿಬಿಎಸ್ 2025, ಬೆಂಗಳೂರು, ದಿನಾಂಕ:14.11.2025ರ ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ 2025-26ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ ಸಂಖ್ಯೆ 111(1)ರಲ್ಲಿ ಘೋಷಿಸಿರುವಂತೆ ಅನುಬಂಧ- 1 ರಂತೆ ರಾಜ್ಯದಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ 1105 ಶಾಲೆಗಳು, 126 ಪಿ.ಎಂ.ಶ್ರೀ ಶಾಲೆಗಳು, ಕೆ.ಕೆ.ಆರ್.ಡಿ.ಬಿ ಯೋಜನೆಯಡಿ 1126 ಶಾಲೆಗಳು ಮತ್ತು 1699 ಮ್ಯಾಗ್ನೆಟ್ ಶಾಲೆಗಳು ಸೇರಿದಂತೆ ಒಟ್ಟಾರೆ 4056 ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ 2025-26ನೇ ಸಾಲಿಗೆ LKG ಹಾಗೂ 2026-27ನೇ ಸಾಲಿಗೆ UKG ಪ್ರತ್ಯೇಕ ತರಗತಿಗಳನ್ನು ಪ್ರಾರಂಭಿಸಲು ಅನುಮತಿ ನೀಡಿ ಆದೇಶಿಸಿದೆ.
ಪೂರ್ವ ಪ್ರಾಥಮಿಕ ತರಗತಿಗಳನ್ನು ನಿರ್ವಹಿಸಲು ಸೂಚನೆಗಳು
ಉಲ್ಲೇಖ(3)ರನ್ವಯ ಆಯ್ಕೆಯಾದ ಶಾಲೆಗಳಲ್ಲಿ, 2025-26ನೇ ಸಾಲಿಗೆ ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸಲು ಎಲ್ಲಾ ಅಗತ್ಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳತಕ್ಕದ್ದು, ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸುವ ಕುರಿತು ಎಸ್.ಡಿ.ಎಂ.ಸಿ ಮತ್ತು ಶಿಕ್ಷಕರು ಸ್ಥಳೀಯ ಮಟ್ಟದಲ್ಲಿ ಕರಪತ್ರ, ಜಾಥಾ, ಮನೆ ಮನೆ ಬೇಟಿ ನೀಡಿ ಮಕ್ಕಳನ್ನು ಗುರುತಿಸುವುದು ಮತ್ತು ಬ್ಯಾನರ್‌ಗಳ ಮೂಲಕ ವ್ಯಾಪಕ ಪ್ರಚಾರವನ್ನು ಮಾಡಿ ಹೆಚ್ಚಿನ ದಾಖಲಾತಿಯಾಗುವಂತೆ ಕ್ರಮವಹಿಸುವುದು.
ಪೂರ್ವ ಪ್ರಾಥಮಿಕ ತರಗತಿಗಳನ್ನು ನಡೆಸಲು ಅಗತ್ಯ ಮೂಲಭೂತ ಸೌಕರ್ಯ ಮತ್ತು ಕಲಿಕಾ ಸೌಕರ್ಯಗಳನ್ನು ನಿಯಮಾನುಸಾರ ಒದಗಿಸಲು ಉಪನಿರ್ದೇಶಕರು(ಆಡಳಿತ) ರವರು ಶಾಲಾ ಮುಖ್ಯ ಶಿಕ್ಷಕರಿಗೆ ಸೂಕ್ತ ನಿರ್ದೇಶನ ನೀಡುವುದು. ಪೂರ್ವ ಪ್ರಾಥಮಿಕ ತರಗತಿಯನ್ನು ಪ್ರಾರಂಭಿಸಲು ಒಂದು ಕೊಠಡಿಯನ್ನು ಗುರುತಿಸಿ ಸಜ್ಜುಗೊಳಿಸುವುದು.
2025-26 ಪೂರ್ವ ಪ್ರಾಥಮಿಕ LKGಯ ಒಂದು ವಿಭಾಗವನ್ನು ಮಾತ್ರ ಪ್ರಾರಂಭಿಸುವುದು, ಈ LKG ತರಗತಿಗೆ 4 ವರ್ಷದಿಂದ 5 ವರ್ಷದ ವಯೋಮಿತಿಯ ಒಳಗಿನ ಮಕ್ಕಳನ್ನು ದಾಖಲು ಮಾಡಿಕೊಳ್ಳುವುದು,
ಕನಿಷ್ಠ 20 ರಿಂದ ಗರಿಷ್ಠ 40 ಮಕಳನ್ನು ದಾಖಲಾತಿ ಮಾಡಿಕೊಳ್ಳುವುದು. ಕನಿಷ್ಠ 20 ಮಕ್ಕಳು ಮಕ್ಕಳು ಲಭ್ಯವಿಲ್ಲದಿದ್ದಲ್ಲಿ ತರಗತಿ ಫಾರಂಭಿಸಕೂಡದು, ಆದರೆ 2026-27 ನೇ ಸಾಲಿಗೆ LKG ಲಭ್ಯವಾದಲ್ಲಿ LKG ತರಗತಿಯನ್ನು ಈ ವರ್ಷದಲ್ಲಿಯೇ ಪ್ರಾರಂಭಿಸುವುದು. ಒಂದು ವೇಳೆ 20 ಪ್ರಾರಂಭಿಸಲು ಅಗತ್ಯವಿರುವ ಎಲ್ಲಾ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುವುದು.
ಸರ್ಕಾರಿ ಆದೇಶ ಅನ್ವಯ ಪ್ರತಿ ಪೂರ್ವ ಪ್ರಾಥಮಿಕ ತರಗತಿಗೆ ಒಬ್ಬ ಶಿಕ್ಷಕರು ಮತ್ತು ಒಬ್ಬರು ಅಯಾರನ್ನು ನಿಗದಿಪಡಿಸಿದ ಮಾನದಂಡಗಳಂತೆ ಶಾಲಾ ಎಸ್.ಡಿ.ಎಂ.ಸಿ ವತಿಯಿಂದ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳುವುದು. ಪೂರ್ವ ಪ್ರಾಥಮಿಕ ತರಗತಿ ಶಿಕ್ಷಕರಿಗೆ ಪ್ರಸ್ತುತ ಅತಿಥಿ ಶಿಕ್ಷಕರಿಗೆ ನೀಡುತ್ತಿರುವ ಸಂಭಾವನೆಯಂತೆಯೇ ಮಾಸಿಕ ರೂ. 12,000.00 ಮತ್ತು ಆಯಾ ಅವರಿಗೆ ಮಾಸಿಕ ರೂ. 6,250.00 ಸಂಭಾವನೆಯನ್ನು ನಿಗದಿಪಡಿಸತಕ್ಕದ್ದು.
ಪೂರ್ವ ಪ್ರಾಥಮಿಕ ಮಕ್ಕಳಿಗೆ ನಿಗದಿಪಡಿಸಿದ ಮಧ್ಯಾಹ್ನ ಊಟದ ಪೌಷ್ಟಿಕ ಮೌಲ್ಯಗಳಂತೆ ಪೂರ್ವ ಪ್ರಾಥಮಿಕ ತರಗತಿಗಳ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿ ಊಟ, ಕ್ಷೀರಭಾಗ್ಯ ಮತ್ತು ಪೂರಕ ಪೌಷ್ಟಿಕ ಆಹಾರವನ್ನು ವಿತರಿಸುವುದು.
2025-26ನೇ ಸಾಲಿನಲ್ಲಿ ಪ್ರಾರಂಭಿಸಲಾಗುವ ಪೂರ್ವ ಪ್ರಾಥಮಿಕ ತರಗತಿಗಳ ಮಾಹಿತಿಯನ್ನು ನಮೂನೆ ಎ ಹಾಗೂ 2026-27ನೇ ಸಾಲಿನಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ನಡೆಸಲು ಉದ್ದೇಶಿಸಿರುವ ಶಾಲೆಗಳ ಮಾಹಿತಿಯನ್ನು ನಮೂನೆ ಬಿ ಯಲ್ಲಿ ನಿಖರವಾಗಿ ಭರ್ತಿ ಮಾಡಿ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳು ಪರಿಶೀಲಿಸಿ, ದೃಢೀಕರಿಸಿ ದಿನಾಂಕ: 26.12.2025ರೊಳಗೆ ಕಡ್ಡಾಯವಾಗಿ ಹಾರ್ಡ್ ಮತ್ತು ಸಾಪ್ ಪ್ರತಿಯನ್ನು (sskecce@gmail.com) ಕಛೇರಿಗೆ ಸಲ್ಲಿಸುವುದು.


