BIG NEWS : ಬೆಂಗಳೂರಿಗೂ ಕಾಲಿಟ್ಟ ‘ಗಾಂಜಾ ಚಾಕೊಲೇಟ್’ ಮಾರಾಟ ಜಾಲ : ಆರೋಪಿ ಅರೆಸ್ಟ್

ಬೆಂಗಳೂರು : ಬೆಂಗಳೂರಿಗೂ ಗಾಂಜಾ ಚಾಕೊಲೇಟ್ ಮಾರಾಟ ಜಾಲ ಕಾಲಿಟ್ಟಿದ್ದು, ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಉತ್ತರ ಪ್ರದೇಶದಿಂದ ತಂದು ಬೆಂಗಳೂರಿಗೆ ಗಾಂಜಾ ಚಾಕ್ಲೇಟ್ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಆರ್​​ಎಂಸಿ ಯಾರ್ಡ್​ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ಉತ್ತರ ಪ್ರದೇಶದಿಂದ ತಂದು ಬೆಂಗಳೂರಿನಲ್ಲಿ ಮಾರಾಟ ಮಾಡಲು ಯತ್ನಿಸಿದ್ದರು. ಈ ಸಂಬಂಧ ಆರ್ಎಂಸಿ ಯಾರ್ಡ್ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಮಹಾಕಾಲ್, ಆನಂದ್, ಚಾರ್ಮಿನಾರ್ ಚಾಕ್ ಲೇಟ್ ಹೆಸರಿನಲ್ಲಿ ಗಾಂಜಾ ಮಾರಾಟ ಮಾಡಲಾಗುತ್ತಿತ್ತು.
ಈ ಸಂಬಂಧ ಶಮೀಮ್ ಅಖ್ತರ್ ಎಂಬಾತನನ್ನು ಬಂಧಿಸಿದ್ದು, 6 ಲಕ್ಷ ಮೌಲ್ಯದ ಚಾಕೊಲೇಟ್ ವಶಪಡಿಸಿಕೊಳ್ಳಲಾಗಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read