BIG NEWS : ರಾಜ್ಯದ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ‘ಬ್ಯಾಕ್ ಲಾಗ್ ಹುದ್ದೆ’ಗಳ ಭರ್ತಿ : ಸರ್ಕಾರದಿಂದ ಮಹತ್ವದ ಆದೇಶ

ಬೆಂಗಳೂರು : ರಾಜ್ಯದ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಬ್ಯಾಕ್ ಲಾಗ್ ಹುದ್ದೆಗಳ ಭರ್ತಿ ಮಾಡಿಕೊಳ್ಳುವ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, 1978 ರಿಂದ 2003ರ ವರೆಗೆ ರಾಜ್ಯದ 04 ವಿಭಾಗೀಯ ಕಛೇರಿಗಳ ಸಹ ನಿರ್ದೇಶಕರುಗಳಿಗೆ ಹಾಗೂ 2003ನೇ ಸಾಲಿನಿಂದ ರಾಜ್ಯದ 35 ಶೈಕ್ಷಣಿಕ ಜಿಲ್ಲೆಗಳ ಉಪ ನಿರ್ದೇಶಕರಾಗಿರುಗಳಿಗೆ ಸರ್ಕಾರಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಗಳಲ್ಲಿನ ನೇರ ನೇಮಕಾತಿ ಮತ್ತು ಮುಂಬಡ್ತಿ ಮಾಹಿತಿಯನ್ನು ಆಯೋಗಕ್ಕೆ ಸಲ್ಲಿಸಲು ಉಲ್ಲೇಖ (3)(4)ರ ತಮ್ಮ ಪತ್ರಗಳಲ್ಲಿ ಆದೇಶಿಸಲಾಗಿದೆ.

ಆದರಂತೆ ಶಿರಸಿ & ರಾಮನಗರ ಶೈಕ್ಷಣಿಕ ಜಿಲ್ಲೆಗಳು ಮಾಹಿತಿ ಸಲ್ಲಿಸಿರುತ್ತಾರೆ. ಉಳಿದಂತೆ ಯಾವ ಶೈಕ್ಷಣಿಕ ಜಿಲ್ಲೆಗಳು & 04 ವಿಭಾಗೀಯ ಕಛೇರಿಗಳು ಮಾಹಿತಿ ಸಲ್ಲಿಸಿರುವುದಿಲ್ಲ, ಈಗಾಗಲೇ 7 ತಿಂಗಳು ಗತಿಸಿರುತ್ತದೆ. ಸರ್ಕಾರಕ್ಕೆ ವರದಿ ಸಲ್ಲಿಸಬೇಕಾಗಿರುವುದರಿಂದ ಸಂಬಂಧಪಟ್ಟವರಿಗೆ ಸರ್ಕಾರಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಗಳಲ್ಲಿನ ನೇರ ನೇಮಕಾತಿ ಅನುಬಂಧ-1 ರಲ್ಲಿ & ಮುಂಬಡ್ತಿ ಅನುಬಂಧ-2ರಲ್ಲಿ ಮಾಹಿತಿಯೊಂದಿಗೆ ವಿವರಿಸಲು ಅಧಿಕಾರಿ/ಸಿಬ್ಬಂದಿಯನ್ನು ಆಯೋಗಕ್ಕೆ ನಿಯೋಜಿಸುವಂತೆ ನಿರ್ದೇಶನ ನೀಡಲು ಕೋರಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read