BIG NEWS: ಗುತ್ತಿಗೆ ನೌಕರರಿಗೂ ಇಎಸ್ಐ ಅನ್ವಯ: ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು: ಕಾರ್ಖಾನೆ ಆವರಣದಲ್ಲಿ ಅದೇ ಸಂಸ್ಥೆಗೆ ಸಂಬಂಧಿತ ಪೂರಕ ಕಾರ್ಯಗಳಲ್ಲಿ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುವ ಕಾರ್ಮಿಕರಿಗೂ ಇಎಸ್ಐ(ನೌಕರರ ರಾಜ್ಯ ವಿಮಾ) ಅನ್ವಯವಾಗಲಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ನೌಕರರ ರಾಜ್ಯ ವಿಮಾ ಇಎಸ್ಐ ಕಾಯ್ದೆ ಸೆಕ್ಷನ್ 2(6) ಅಡಿಯಲ್ಲಿ ನೌಕರ ಎಂದರೆ ಮುಖ್ಯ ಉದ್ಯೋಗದಾತ ನೇರವಾಗಿ ನೇಮಿಸಿಕೊಂಡ ವ್ಯಕ್ತಿಗಳನ್ನು ಮಾತ್ರವಲ್ಲದೆ ಕಾರ್ಖಾನೆಯ ಇತರೆ ಕಾರ್ಯಗಳಿಗೆ ಗುತ್ತಿಗೆದಾರರ ಮೂಲಕ ನೇಮಿಸಿಕೊಂಡ ಕಾರ್ಮಿಕರನ್ನು ಒಳಗೊಂಡಿರುತ್ತದೆ. ಹಾಗಾಗಿ ಕಾರ್ಖಾನೆ ಕಾರ್ಯಗಳಿಗೆ ಗುತ್ತಿಗೆದಾರರ ಮೂಲಕ ನೇಮಕಗೊಂಡವರು ಇಎಸ್ಐ ಕಾಯ್ದೆ ಒಳಪಡಲಿದ್ದಾರೆ ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಲಾಗಿದೆ.

ಕಾರ್ಮಿಕರಿಗೆ ಇಎಸ್ಐ ಪಾವತಿಸದ ಮೆಸೆಸ್ ಸನ್ಸೇರಾ ಇಂಜಿನಿಯರಿಂಗ್ ಕಂಪನಿಗೆ ವಿಧಿಸಿದ್ದ ದಂಡದ ಮೊತ್ತ ಕಡಿಮೆ ಮಾಡಿದ್ದ ಇಎಸ್ಐ ನ್ಯಾಯಾಲಯದ ಕ್ರಮ ಪ್ರಶ್ನಿಸಿ ಇಎಸ್ಐ ಕಾರ್ಪೊರೇಷನ್ ಸಹಾಯಕ ನಿರ್ದೇಶಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ರಾಮಚಂದ್ರ ಡಿ. ಹುದ್ದಾರ ಅವರಿದ್ದ ಏಕ ಸದಸ್ಯ ಪೀಠದಿಂದ ಈ ಆದೇಶ ನೀಡಲಾಗಿದೆ.

ಇಎಸ್ಐ ಕಾರ್ಪೊರೇಷನ್ ವಿಧಿಸಿದ ಮೊತ್ತ ಕಾನೂನಿನ ಅನ್ವಯ ಸಮರ್ಥವಾಗಿದ್ದು, 13,52,825 ರೂ.ಗಳನ್ನು ಮುಂದಿನ 8 ವಾರದಲ್ಲಿ ಪಾವತಿಸುವಂತೆ ಕಂಪನಿಗೆ ಸೂಚಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read