ನವದೆಹಲಿ: ದೇಶಾದ್ಯಂತ ವೈದ್ಯರು ಜೆನೆರಿಕ್ ಔಷಧಿಗಳನ್ನು ಮಾತ್ರ ಶಿಫಾರಸು ಮಾಡುವುದನ್ನು ಕಡ್ಡಾಯಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಫೆಡರೇಶನ್ ಆಫ್ ಮೆಡಿಕಲ್ ಅಂಡ್ ಸೇಲ್ಸ್ ರೆಪ್ರೆಸೆಂಟೇಟಿವ್ಸ್ ಅಸೋಸಿಯೇಷನ್ಸ್ ಆಫ್ ಇಂಡಿಯಾ(FMSRI) ಮತ್ತು ಇತರರು ಸಲ್ಲಿಸಿದ ಅರ್ಜಿಯನ್ನು ಆಲಿಸಿದ ನಂತರ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಜುಲೈನಲ್ಲಿ ಮುಂದಿನ ವಿಚಾರಣೆ ನಿಗದಿಪಡಿಸಿದೆ.
ನ್ಯಾಯಮೂರ್ತಿ ವಿಕ್ರಮ್ ನಾಥ್ ನೇತೃತ್ವದ ನ್ಯಾಯಮೂರ್ತಿ ಸಂಜಯ್ ಕರೋಲ್ ಮತ್ತು ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ನ ಮೂವರು ನ್ಯಾಯಾಧೀಶರ ಪೀಠವು, ವೈದ್ಯರು ಜೆನೆರಿಕ್ ಔಷಧಿಗಳನ್ನು ಮಾತ್ರ ಶಿಫಾರಸು ಮಾಡುವುದನ್ನು ಕಡ್ಡಾಯಗೊಳಿಸಬೇಕು ಎಂದು ಅಭಿಪ್ರಾಯಪಟ್ಟಿದೆ. ರಾಜಸ್ಥಾನದಲ್ಲಿ ಪ್ರತಿಯೊಬ್ಬ ವೈದ್ಯಕೀಯ ವೃತ್ತಿಪರರು ಜೆನೆರಿಕ್ ಔಷಧಿಯನ್ನು ಮಾತ್ರ ಶಿಫಾರಸು ಮಾಡಬೇಕು ಎಂದು ಈಗ ಕಾರ್ಯನಿರ್ವಾಹಕ ಸೂಚನೆ ಇದೆ ಎಂದು ಹೇಳಲಾಗಿದೆ.