BIG NEWS : ಬೆಂಗಳೂರಲ್ಲಿ ಮನೆ ಬಾಗಿಲಿಗೆ ಬರಲಿದೆ ‘ಶುದ್ದ ಕುಡಿಯುವ ನೀರು’ : ‘ಸಂಚಾರಿ ಕಾವೇರಿ’ ಯೋಜನೆಗೆ DCM ಡಿಕೆ ಶಿವಕುಮಾರ್ ಚಾಲನೆ

ಬೆಂಗಳೂರು : ವಿಧಾನಸೌಧ ಆವರಣದ ಗ್ರ್ಯಾಂಡ್ ಸ್ಟೆಪ್ಸ್ ಮುಂಭಾಗ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ತಂದಿರುವ ಸರ್ವರಿಗೂ ‘ಸರಳ ಕಾವೇರಿ’ ಮನೆ ಬಾಗಿಲಿಗೆ ‘ಸಂಚಾರಿ ಕಾವೇರಿ’ ಯೋಜನೆಗಳಿಗೆ ಡಿಸಿಎಂ ಡಿಕೆ ಶಿವಕುಮಾರ್ ಚಾಲನೆ ನೀಡಿದರು.

‘ಸರಳ ಕಾವೇರಿ’ ಯೋಜನೆಯ ಮೂಲಕ ನೀರಿನ ಸಂಪರ್ಕ ಶುಲ್ಕದಲ್ಲಿ ಕೇವಲ 20% ಪಾವತಿ ಮಾಡಿ ಹೊಸ ಸಂಪರ್ಕ ಪಡೆಯಲು, ಉಳಿಕೆ 80% ಮೊತ್ತವನ್ನು ಕಡಿಮೆ ಬಡ್ಡಿದರದಲ್ಲಿ 12 ಕಂತುಗಳಲ್ಲಿ ಪಾವತಿಸಲು ಅವಕಾಶ ನೀಡಲಾಗಿದೆ. ಅಪಾರ್ಟ್ಮೆಂಟ್ ವೆಲ್ಫೇರ್ ಅಸೋಸಿಯೇಷನ್ ಅಥವಾ ಮನೆಗಳ ಮಾಲೀಕರಿಗೆ ಹೊಸ ಸಂಪರ್ಕ ಪಡೆಯಲು 2 ತಿಂಗಳು ಕಾಲಾವಕಾಶ ನೀಡಲಾಗಿದೆ ಎಂದರು.

ಇನ್ನು, ‘ಸಂಚಾರಿ ಕಾವೇರಿ’ ಯೋಜನೆಯ ಮೂಲಕ ಮಹಾನಗರಿಯ ಜನತೆಗೆ ಶುದ್ಧ ಕುಡಿಯುವ ನೀರನ್ನು ಬೆಂಗಳೂರು ಜಲಮಂಡಳಿಯ ಟ್ಯಾಂಕರ್ ಮೂಲಕ ನೇರವಾಗಿ ಮನೆಬಾಗಿಲಿಗೆ ತಲುಪಿಸಲಾಗುತ್ತದೆ. ಬಿಐಎಸ್ ಪ್ರಮಾಣಿತ ಶುದ್ಧ ಕುಡಿಯುವ ನೀರನ್ನು ಸಕಾಲದಲ್ಲಿ ಪೂರೈಸುವ ವ್ಯವಸ್ಥೆ ರೂಪಿಸಲಾಗಿದೆ. ಮೊಬೈಲ್ ಸ್ನೇಹಿ ‘ಸಂಚಾರಿ ಕಾವೇರಿ’ ಆ್ಯಪ್ ಹಾಗೂ ವೆಬ್ಸೈಟ್ ರಚಿಸಿ, ಆನ್ ಡಿಮ್ಯಾಂಡ್ ಟ್ಯಾಂಕರ್ ನೀರು ಬುಕ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read