BIG NEWS : ‘ಪೇಪರ್ ಆಧಾರಿತ ಆಸ್ತಿ ನೋಂದಣಿ’ ರದ್ದು ; ಇನ್ಮುಂದೆ ಇ-ಆಸ್ತಿ ನೋಂದಣಿ ಕಡ್ಡಾಯ

ಬೆಂಗಳೂರು : ವಿಧಾನ ಸಭೆಯಿಂದ ಅಂಗೀಕೃತ ರೂಪದಲ್ಲಿದ್ದ ನೋಂದಣಿ (ಕರ್ನಾಟಕ) ತಿದ್ದುಪಡಿ ವಿಧೇಯಕ- 2024 ಸೇರಿದಂತೆ ಮೂರು ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರಗೊಂಡವು. ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು, ನೋಂದಣಿ (ಕರ್ನಾಟಕ) ತಿದ್ದುಪಡಿ ವಿಧೇಯಕ 2024 ಮಂಡಿಸಿದರು.

ಕಡ್ಡಾಯವಾಗಿ ಎಲ್ಲಾ ಆಸ್ತಿ ನೋಂದಣಿಗಳನ್ನು ಈಗ ಡಿಜಿಟಲ್ ವೇದಿಕೆಯಲ್ಲಿ (ಇ-ನೋಂದಣಿ) ಮಾಡಬೇಕಾಗಿದೆ. ಪೇಪರ್ ನಲ್ಲಿ ನೋಂದಣಿ ಮಾಡುವ ಕಾರ್ಯದಿಂದ ಸರ್ಕಾರಕ್ಕೆ ಹೆಚ್ಚು ನಷ್ಟ ಆಗುತ್ತಿದೆ ಎನ್ನಲಾಗಿದ್ದು, ಈ ಹೊಸ ನಿಯಮವು ವಿಧಾಸಭೆಯಲ್ಲಿ ಅಂಗೀಕಾರವಾಗಿದೆ.

ಇನ್ಮುದೆ ಪೇಪರ್ಖಾತಾ ಆಧಾರದಲ್ಲಿ ನೋಂದಣಿ ಮಾಡುವುದನ್ನು ರದ್ದು ಮಾಡುತ್ತಿದ್ದೇವೆ. ಇನ್ನು ಮುಂದೆನೋಂದಣಿಗೆ ಇ-ಆಸ್ತಿ ಕಡ್ಡಾಯ ಮಾಡಲಾಗುತ್ತಿದೆ. ಕಡ್ಡಾಯವಾಗಿ ನೋಂದಾಯಿಸಲಾಗುವ ಆಯ್ದ ದಾಖಲೆಗಳ ಇ- ನೋಂದಣಿಯನ್ನು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಾವಣೆ ಮಾಡಲಾಗುವುದು. ಗ್ರಾಮೀಣ ಪ್ರದೇಶಗಳಿಗೆ ಇ- ಸ್ವತ್ತು, ನಗರ ಪ್ರದೇಶಗಳಿಗೆ ಇ- ಆಸ್ತಿ ನೋಂದಣಿ ಆಟೋಮೆಟಿಕ್ ಆಗಿ ಪರಿಶೀಲನೆ ಆಗಲಿದೆ. ಕಾನೂನು ಬಾಹಿರ ನೋಂದಣಿಯನ್ನು ಕಡಿವಾಣ ಹಾಕಲು ಈ ತಿದ್ದುಪಡಿ ತರಲಾಗುತ್ತಿದೆ. ಬಿಡಿಎ ಖಾತೆ ಅಥವಾ ಇ ಖಾತಾ ಇದ್ದರೆ ಮಾತ್ರ ನೋಂದಣಿ ಆಗಲಿದೆ ಎಂದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read