ಬೆಂಗಳೂರು : UGCET-25 ಅರ್ಜಿಯಲ್ಲಿ ಇನ್ನೂ ಏನಾದರೂ ತಪ್ಪುಗಳಿದ್ದು, ಅವುಗಳನ್ನು ತಿದ್ದುಪಡಿ ಮಾಡಿಕೊಳ್ಳಲು ಮೇ 2ರವರೆಗೆ ಕೆಇಎ ಅವಕಾಶ ನೀಡಿದೆ.
ಕೃಷಿಕರ ಕೋಟಾದಡಿ ಪ್ರಾಯೋಗಿಕ ಪರೀಕ್ಷೆ ಬರೆಯಲು ಅರ್ಜಿಯಲ್ಲಿ ನಮೂದಿಸದೇ ಇದ್ದಲ್ಲಿ ಏ.20ರೊಳಗೆ ತಿದ್ದುಪಡಿ ಮಾಡಿಕೊಳ್ಳಬೇಕು ಅಂತಹವರು ಏ.21ರಂದು ದಾಖಲೆ ಅಪ್ಲೋಡ್ ಮಾಡಿ ಎಂದು ತಿಳಿಸಿದೆ.
2025ನೇ ಸಾಲಿನ ಇಂಜಿನಿಯರಿಂಗ್, ಯೋಗ ಮತ್ತು ನ್ಯಾಚುರೋಪತಿ, ಬಿ-ಫಾರ್ಮ ಮತ್ತು ಫಾರ್ಮ-ಡಿ, ಕೃಷಿ ವಿಜ್ಞಾನ ಕೋರ್ಸುಗಳು, ವೆಟರಿನರಿ, ಬಿ.ಎಸ್ಸಿ (ನರ್ಸಿಂಗ್) ಹಾಗೂ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ತಾವು ಸಲ್ಲಿಸಿರುವ ಅರ್ಜಿಯಲ್ಲಿ ತಪ್ಪಾಗಿ ಮಾಹಿತಿಯನ್ನು ನಮೂದಿಸಿ, ತಿದ್ದುಪಡಿ ಮಾಡಲು ಇಚ್ಚಿಸಿದ್ದಲ್ಲಿ, ದಿನಾಂಕ 18.04.2025ರಿಂದ 02.05.2025ರವರೆಗೆ ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಅಭ್ಯರ್ಥಿಗಳು ಅರ್ಜಿಯಲ್ಲಿ ಅವರ ಹೆಸರು, ತಂದೆ/ತಾಯಿಯ ಹೆಸರು, ಜನ್ಮ ದಿನಾಂಕ, ಎಸ್ಎಸ್ಎಲ್ಸಿ/10ನೇ ತರಗತಿಯ ನೊಂದಣಿ ಸಂಖ್ಯೆ, 2ನೇ ಪಿಯು/12ನೇ ತರಗತಿಯ ನೊಂದಣಿ ಸಂಖ್ಯೆ ಇತ್ಯಾದಿ ಮಾಹಿತಿಗಳು ತಪ್ಪಾಗಿ ನಮೂದು ಮಾಡಿದ್ದಲ್ಲಿ ಅವುಗಳ ತಿದ್ದುಪಡಿಗೆ ಪ್ರಾಧಿಕಾರಕ್ಕೆ ಮನವಿಯನ್ನು ದಾಖಲೆ ಸಮೇತ ಸಲ್ಲಿಸುವುದು.
ಅಭ್ಯರ್ಥಿಗಳು ಕೃಷಿಕರ ಕೋಟಾದಡಿ ಪ್ರಾಯೋಗಿಕ ಪರೀಕ್ಷೆ ಬರೆಯಲು ಸಿಇಟಿ 2025ರ ಅರ್ಜಿಯಲ್ಲಿ ಕೃಷಿಕರ ಕೋಟಾ ನಮೂದಿಸದೇ ಇದ್ದಲ್ಲಿ, ಅಂತಹ ಅಭ್ಯರ್ಥಿಗಳಿಗೆ ದಿನಾಂಕ 20.04.2025ರವರೆಗೆ ಮಾತ್ರ ತಿದ್ದುಪಡಿಗೆ ಅವಕಾಶ ನೀಡಲಾಗಿದೆ. ಹೊಸದಾಗಿ ಕೃಷಿಕರ ಕೋಟಿ ನಮೂದಿಸಿದವರು ದಿನಾಂಕ 21.04.2025ರಂದು https://pg-admission.kar.nic.in/ugcet/ug home.aspx. ಅಪ್ಲೋಡ್ ಮಾಡುವುದು ಎಂದು ತಿಳಿಸಿದೆ.
#UGCET-25 ಅರ್ಜಿಯಲ್ಲಿ ಇನ್ನೂ ಏನಾದರೂ ತಪ್ಪುಗಳಿದ್ದು, ಅವುಗಳನ್ನು ತಿದ್ದುಪಡಿ ಮಾಡಿಕೊಳ್ಳಲು ಮೇ 2ರವರೆಗೆ #KEA ಅವಕಾಶ ನೀಡಿದೆ.
— ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA (@KEA_karnataka) April 18, 2025
ಕೃಷಿಕರ ಕೋಟಾದಡಿ ಪ್ರಾಯೋಗಿಕ ಪರೀಕ್ಷೆ ಬರೆಯಲು ಅರ್ಜಿಯಲ್ಲಿ ನಮೂದಿಸದೇ ಇದ್ದಲ್ಲಿ ಏ.20ರೊಳಗೆ ತಿದ್ದುಪಡಿ ಮಾಡಿಕೊಳ್ಳಬೇಕು ಅಂತಹವರು ಏ.21ರಂದು ದಾಖಲೆ ಅಪ್ಲೋಡ್ ಮಾಡಿ.@CMofKarnataka @drmcsudhakar pic.twitter.com/nc3RM2qpaq