ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಳಿಕ ನಟ ಚಿಕ್ಕಣ್ಣ ಹಾಗೂ ನಟ ದರ್ಶನ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
ಹೌದು, ನಟ ಚಿಕ್ಕಣ್ಣನ ಜೊತೆ ದರ್ಶನ್ ‘ವಾಮನ’ ಚಿತ್ರ ವೀಕ್ಷಿಸಿದ್ದಾರೆ. ಬೆಂಗಳೂರಿನ ಜಿಟಿ ಮಾಲ್ ನಲ್ಲಿ ಇಬ್ಬರು ಕೂತು ಒಟ್ಟಿಗೆ ಸಿನಿಮಾ ವೀಕ್ಷಿಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ಚಿಕ್ಕಣ್ಣ ಪ್ರಮುಖ ಸಾಕ್ಷಿದಾರರಾಗಿದ್ದರು. ಚಿಕ್ಕಣ್ಣನನ್ನು ಠಾಣೆಗೆ ಕರೆಸಿ ಪೊಲೀಸರು ಹೇಳಿಕೆ ದಾಖಲಿಸಿದ್ದರು. ಇದೀಗ ಸಾಕ್ಷಿದಾರ ಚಿಕ್ಕಣ್ಣನ ಜೊತೆ ಕೊಲೆ ಆರೋಪಿ ನಟ ದರ್ಶನ್ ಸಿನಿಮಾ ವೀಕ್ಷಿಸಿದ್ದಾರೆ.
ವಾಮನ ಸಿನಿಮಾದಲ್ಲಿ ನಟ ಧನ್ವೀರ್ ನಾಯಕನಾಗಿ ನಟಿಸಿದ್ದು, ಚಿಕ್ಕಣ್ಣ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದಾರೆ. ಈ ಸಿನಿಮಾವನ್ನು ಎಸ್ ಶಂಕರ್ ರಾಮನ್ ನಿರ್ದೇಶಿಸಿದ್ದಾರೆ.