BIG NEWS: 4 ಕೋಟಿ 75 ಲಕ್ಷ ಹಣ ಜಪ್ತಿ; 3 ATM ವಾಹನಗಳು ವಶಕ್ಕೆ

ಬೆಂಗಳೂರು: ಆರ್ ಬಿ  ಐ ನಿಯಮ ಉಲ್ಲಂಘನೆ ಮಾಡಿ ಹೆಚ್ಚುವರಿಯಾಗಿ ಹಣ ಸಾಗಿಸುತ್ತಿದ್ದ ಆರೋಪದಲ್ಲಿ ಬರೋಬ್ಬರಿ 4.75 ಕೋಟಿ ಹಣವನ್ನು ಚುನಾವಣಾಧಿಕಾರಿಗಳು ಜಪ್ತಿ ಮಾಡಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ಬಳಿ ನಡೆದಿದೆ.

ನೀತಿ ಸಂಹಿತೆ ಹಾಗೂ ಆರ್ ಬಿ ಐ ನಿಯಮ ಉಲ್ಲಂಘಿಸಿ ಎಟಿಎಂ ವಾಹನದಲ್ಲಿ ಅಕ್ರಮವಾಗಿ ಹಣ ಸಾಗಿಸುತ್ತಿದ್ದ ಹಿನ್ನೆಲೆಯಲ್ಲಿ 4 ಕೋಟಿ 75 ಲಕ್ಷ ಹಣವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ರೈಟರ್ಸ್ ಕಂಪನಿಗೆ ಸೇರಿದ್ದ 3 ಎಟಿಎಂ ವಾಹನಗಳಲ್ಲಿ ಈ ಪ್ರಮಾಣದ ಹಣವನ್ನು ಸಾಗಿಸಲಾಗುತ್ತಿತ್ತು. ಆನೇಕಲ್ ಬಳಿ ವಾಹನವನ್ನು ತಪಾಸಣೆ ನಡೆಸಿದಾಗ 4.75 ಕೋಟಿ ಹಣವಿರುವುದು ಪತ್ತೆಯಾಗಿದೆ.

ಸೂಕ್ತ ದಾಖಲೆ ಒದಗಿಸದ ಹಿನ್ನೆಲೆಯಲ್ಲಿ ಹಣವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದು, ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read