BIG NEWS: ಸರ್ಕಾರದ ಈ ಭರವಸೆಯನ್ನು ನಾವು ಒಪ್ಪಲ್ಲ ಎಂದ ನೌಕರರ ಸಂಘದ ಅಧ್ಯಕ್ಷ

ಬೆಂಗಳೂರು: ಸರ್ಕಾರಿ ನೌಕರರ ವೇತನವನ್ನು ಶೇ.17ರಷ್ಟು ಹೆಚ್ಚಳ ಮಾಡಲಾಗುವುದು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದು, ಆದರೆ ರಾಜ್ಯ ಸರ್ಕಾರದ ಈ ಭರವಸೆಯನ್ನು ನಾವು ಒಪ್ಪಲ್ಲ ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ತಿಳಿಸಿದ್ದಾರೆ.

ಈ ಬಗ್ಗೆ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಷಡಕ್ಷರಿ, ಸರ್ಕಾರ ಬರಿ ಭರವಸೆ ನಿಡುವುದರಲ್ಲಿ ಶೀಘ್ರ ಜಾರಿ ಮಾಡ್ತೀವಿ ಎಂಬುದರಲ್ಲೇ ಕಾಲ ಕಳೆಯುತ್ತಿದೆ. ಶೇ.17ರಷ್ಟು ವೇತನ ಹೆಚ್ಚಳ ನಾವು ಒಪ್ಪಲ್ಲ. ಶೇ.30ರಷ್ಟಾದರೂ ಹೆಚ್ಚಳ ಮಾಡಬೇಕು ಎಂದು ತಿಳಿಸಿದ್ದಾರೆ.

ಅಧಿಕಾರಿಗಳ ಜೊತೆಗಿನ ಸಿಎಂ ಬೊಮ್ಮಾಯಿ ಅವರ ಸಭೆಗೆ ನಮಗೂ ಆಹ್ವಾನ ನೀಡಿದ್ದಾರೆ. ಸಭೆಯಲ್ಲಿ ಏನು ಹೇಳುತ್ತಾರೆ ನೋಡೋಣ. ಮೊದಲು ಆದೇಶ ಹೊರಡಿಸಲಿ ಎಂದರು.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read